ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಜಿಲ್ಲಾಸ್ಪತ್ರೆಯಿಂದ ಕಳವಾದ ನವಜಾತ ಶಿಶುವನ್ನು 36 ಗಂಟೆಯೊಳಗೆ ತಾಯಿಯ ಮಡಿಲಿಗೆ ಸೇರಿಸಿದ ಪೊಲೀಸರು..! ಭಾವುಕರಾದ ಪೋಷಕರು..!

ನ್ಯೂಸ್ ನಾಟೌಟ್ : ಕಲಬುರಗಿಯ ಜಿಲ್ಲಾಸ್ಪತ್ರೆಯ ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಿಂದ ಅಪಹರಿಸಲ್ಪಟ್ಟಿದ್ದ ನವಜಾತ ಶಿಶುವನ್ನು ನಗರ ಪೊಲೀಸರು 36 ಗಂಟೆಗಳ ಒಳಗೆ ಪತ್ತೆ ಹಚ್ಚಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ(ನ.25) ಕಳವಾಗಿದ್ದ ಮಗುವನ್ನು ಕಮಿಷನರ್ ಡಾ.ಶರಣಪ್ಪ ಎಸ್.ಡಿ. ನೇತೃತ್ವದ ಪೊಲೀಸ್ ತಂಡ ಕ್ಷಿಪ್ರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ ಮಂಗಳವಾರ ತಡರಾತ್ರಿ ಆಸ್ಪತ್ರೆಗೆ ಧಾವಿಸಿ, ತಾಯಿಯ ಮಡಿಲಿಗೆ ಸೇರಿಸಿದೆ. ಈ ವೇಳೆ ಭಾವುಕರಾದ ಪೋಷಕರು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.

ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಶಿಶುವನ್ನು ಸೋಮವಾರ ಮುಂಜಾನೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಿದ್ದರು. ಈ ಬಗ್ಗೆ ಬ್ರಹ್ಮಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Click

https://newsnotout.com/2024/11/central-jail-protest-by-accued-kannada-nbews-viral-news/

Related posts

ನವದಂಪತಿಗಳೇ.. ದುಬಾರಿ ಫಾರಿನ್ ಹನಿಮೂನ್ ಟ್ರಿಪ್ ಬಿಟ್ಟು ಬಿಡಿ, ಭಾರತದಲ್ಲೇ ಇದೆ ಟಾಪ್ 11 ಹನಿಮೂನ್ ಸ್ಪಾಟ್..!

ಸುಬ್ರಹ್ಮಣ್ಯ: ದೇವರ ಪೂಜೆಗೆ ಬಂದ ಕಾಲೇಜು ವಿದ್ಯಾರ್ಥಿನಿಯ ಎದೆ ಮುಟ್ಟಿದ ಅಜ್ಜ..!, ವಿದ್ಯಾರ್ಥಿನಿಯಿಂದ ಪೊಲೀಸ್ ದೂರು ದಾಖಲು

ದರ್ಶನ್ ಪ್ರಕರಣ: ಗೌತಮ್ ಹೆಸ್ರಲ್ಲಿ ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸ್ತಿದ್ದ ಎಂದ ಮಾಜಿ ಬಿಗ್‌ಬಾಸ್ ಸ್ಪರ್ಧಿ..! ಚಿತ್ರಾಲ್ ರಂಗಸ್ವಾಮಿ ಈ ಬಗ್ಗೆ ವಿವರಿಸಿದ್ದೇನು..?