ಕ್ರೈಂವೈರಲ್ ನ್ಯೂಸ್

ಕಾರಾಗೃಹದ ಆಂಬ್ಯುಲೆನ್ಸ್‌ನಲ್ಲೇ ಖೈದಿಯೊಂದಿಗೆ ಮದ್ಯ ಸೇವಿಸಿದ ಪೊಲೀಸರು! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಕೇಂದ್ರ ಕಾರಾಗೃಹದ ಆಂಬ್ಯುಲೆನ್ಸ್‌ ನಲ್ಲಿ ಇಬ್ಬರು ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಗಳು ಖೈದಿಯೊಂದಿಗೆ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪಂಜಾಬ್‌ನ ಹೋಶಿಯಾರ್‌ಪುರ ಕೇಂದ್ರ ಕಾರಾಗೃಹಕ್ಕೆ ಸೇರಿದ ಆಂಬ್ಯುಲೆನ್ಸ್‌ ಇದಾಗಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಕೆಂಪು ಟಿ ಶರ್ಟ್ ಧರಿಸಿದ್ದ ಖೈದಿ ಸೇರಿ ಮದ್ಯ ಆಂಬ್ಯುಲೆನ್ಸ್ ಸೇವಿಸುತ್ತಿರುವುದು ಕಾಣಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಕುರಿತು ಎಲ್ಲೆಡೆ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೆ ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದೆ ರೀತಿಯ ಘಟನೆ ಒಡಿಶಾದ ತಿರ್ಟೋಲ್ ಪ್ರದೇಶದಲ್ಲಿ ಈ ಹಿಂದೆಯೂ ನಡೆದಿತ್ತು ಎನ್ನಲಾಗಿದ್ದು ರೋಗಿಯೊಬ್ಬರನ್ನು ತಪಾಸಣೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಮದ್ಯ ಸೇವಿಸಿದ ಘಟನೆ ನಡೆದಿತ್ತು.

Related posts

ಉಳುವಾರು ಯಶಸ್ ನಿಧನ

ಬೆಣ್ಣೆ ದೋಸೆಯಲ್ಲಿ ಮತದಾನ ಜಾಗೃತಿ..! ಏನಿದು ಅಕ್ಷರ ದೋಸೋತ್ಸವ..?

ಮಡಿಕೇರಿ: ಬೈಕ್ ಶೋರೋಂನಲ್ಲಿ ಯುವಕನಿಗೆ ಕತ್ತರಿಯಿಂದ ಇರಿದು ಕೊಂದ ಪ್ರಕರಣ, ಇಬ್ಬರ ಬಂಧನ, ಘಟನೆ ನಡೆದಿದ್ದಾದರೂ ಏಕೆ..?