Uncategorized

ಫೇಸ್‌ಬುಕ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಪೊಲೀಸಪ್ಪನ ಕಾಮದಾಟ..!

ನ್ಯೂಸ್ ನಾಟೌಟ್: ಕೆಟ್ಟ ದಾರಿಯಲ್ಲಿ ನಡೆಯುವವರನ್ನು ಹಿಡಿದು ಬುದ್ಧಿ ಹೇಳಿ ಸರಿ ದಾರಿಗೆ ತರುವುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ ಅಂಥಹ ಪೊಲೀಸರೆ ತಪ್ಪು ಹಾದಿಯಲ್ಲಿ ಹೋದರೆ ಸಮಾಜದ ಸ್ಥಿತಿ ಏನಾಗಬೇಡ ಹೇಳಿ. ಹೌದು, ಇಲ್ಲೊಬ್ಬ ಪೊಲೀಸಪ್ಪ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.


ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಗೆ ಬರುವ ವೈರ್‌ಲೆಸ್ ಠಾಣೆಯ ಪಿಎಸ್‌ಐ ಲಾಲ್‌ಸಾಬ್ ಅಲ್ಲಿಸಾಬ್ ನದಾಫ(28) ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಕಾಲೇಜು ವಿದ್ಯಾರ್ಥಿನಿಯೊಬ್ಬರು ಗುರುವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


2020ರ ಜೂನ್‌ 16ರಂದು ಪಿಎಸ್‌ಐ ಲಾಲ್‌ಸಾಬ್‌ ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಪರಿಚಯವಾಗಿದ್ದರು. ಪ್ರತಿ ದಿನ ಚಾಟ್‌ನಿಂದ ಇಬ್ಬರ ನಡುವೆ ಸ್ನೇಹ ಬಳೆದಿತ್ತು. ಮದುವೆ ಆಗುವುದಾಗಿ ನಂಬಿಸಿ ಕೆಲ ದಿನಗಳ ನಂತರ ಬೆಳಗಾವಿಯ ಸುಭಾಷ ನಗರದ ತನ್ನ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕೇಳಿದ್ದರು. ನಾನು ಒಪ್ಪದೇ ಇದ್ದಾಗ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದರು. ಈ ವಿಷಯ ಯಾರಿಗೂ ಹೇಳದಿದ್ದರೆ ಮದುವೆ ಮಾಡಿಕೊಳ್ಳುವುದಾಗಿ ಪದೇಪದೇ ಹೇಳಿದ್ದರು. ಅಲ್ಲದೇ ಮದುವೆ ಆಗುವ ಭರವಸೆ ನೀಡಿ ಬಾಂಡ್‌ ಕೂಡ ಬರೆದುಕೊಟ್ಟಿದ್ದರು. ಬಳಿಕ, ಬೆಳಗಾವಿಯ ಪೊಲೀಸ್‌ ವಸತಿಗೃಹ ಹಾಗೂ ಕೆಲವು ಲಾಡ್ಜ್‌ಗಳಿಗೂ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದರು. ಆದರೆ, ಈಗ ಮತ್ತೊಬ್ಬಳೊಂದಿಗೆ ಮದುವೆ ಆಗಿದ್ದಾರೆ’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ. ‘ನನ್ನನ್ನೇ ಮದುವೆ ಆಗುವುದಾಗಿ ಬಾಂಡ್‌ ಕೂಡ ಬರೆದುಕೊಟ್ಟಿದ್ದರಿಂದ, ಅದರ ಭರವಸೆ ಮೇಲೆ ನಾನು ಇಷ್ಟು ದಿನ ಸಹಿಸಿಕೊಂಡೆ. ಅಲ್ಲದೇ, ನನ್ನ ಹಾಗೂ ಲಾಲ್‌ಸಾಬ್‌ ನಡುವಿನ ಸಂಬಂಧದ ಬಗ್ಗೆ ಪೂರ್ಣವಾಗಿ ತಿಳಿಸಿದರೂ ಬೇರೊಬ್ಬ ಯುವತಿ ಅವರನ್ನು ಮದುವೆಯಾದರು. ಈ ಮೂಲಕ ಅವರಿಂದಲೂ ನನಗೆ ಅನ್ಯಾಯವಾಗಿದೆ’ ಎಂದೂ ದೂರಿನಲ್ಲಿ ಬರೆದಿದ್ದಾರೆ. ಲಾಲ್‌ಸಾಬ್‌ ಕಳೆದ ಆರು ತಿಂಗಳಿಂದ ಅನಾರೋಗ್ಯದ ಕಾರಣ ರಜೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅವರ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗಲಿಲ್ಲ.

Related posts

ಕಾಬೂಲ್ ಬಾಂಬ್ ಸ್ಫೋಟದ ಹಿಂದೆ ಕೇರಳದ 14 ಐಸಿಎಸ್ ಉಗ್ರರು, ಭಾರತದಲ್ಲಿ ಬೇರು ಬಿಡುವುದಕ್ಕೆ ಐಸಿಸ್ ಪ್ಲ್ಯಾನ್

ಮನೆಯಲ್ಲಿ ಮಲಗಿದ್ದ ವ್ಯಕ್ತಿಗೆ ಟೋಲ್ ಶಾಕ್..!

ಸ್ಕೂಟಿ,ಬೈಕ್‌ನಲ್ಲಿ ಪ್ರಯಾಣಿಸುವಾಗ ನಿಮ್ಮ ಮಕ್ಕಳಿಗೆ ಹೆಲ್ಮೆಟ್‌ ಹಾಕುತ್ತಿಲ್ವ? ಪೊಲೀಸರು ಕ್ರಮ ತೆಗೆದುಕೊಳ್ಳೊದಂತು ಗ್ಯಾರಂಟಿ..!ಯಾಕೆ ಗೊತ್ತಾ.. ಈ ವರದಿ ಓದಿ