ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಿ.ಎಸ್.ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಪೊಲೀಸರ ನಿಗೂಢ ನಾಪತ್ತೆ! ಒಂದು ತಿಂಗಳಾದರೂ ಸುಳಿವೇ ಇಲ್ಲ..!

ನ್ಯೂಸ್‌ ನಾಟೌಟ್‌: ಒಂದು ತಿಂಗಳ ಮೊದಲು ಮಧ್ಯಪ್ರದೇಶದ ಗ್ವಾಲಿಯರ್ ಬಳಿಯ ತೇಕನಾಪುರದಲ್ಲಿರುವ ಬಿಎಸ್ಎಫ್ ಅಕಾಡೆಮಿಯಿಂದ ನಾಪತ್ತೆಯಾಗಿರುವ ಇಬ್ಬರು ಮಹಿಳಾ ಪೊಲೀಸರಿಗಾಗಿ ಹಲವು ಏಜೆನ್ಸಿಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಅಂತರರಾಷ್ಟ್ರೀಯ ಗಡಿಗಳಲ್ಲಿರುವ ಬಿಎಸ್ಎಫ್ ಘಟಕಗಳಿಗೆ ಕೂಡಾ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಆದರೂ ಪತ್ತೆಯಾಗಿಲ್ಲ.

ಜಬಲ್ಪುರದ ಆಕಾಂಕ್ಷಾ ನಿಖಾರ್ ಮತ್ತು ಬಂಗಾಳದ ಮುರ್ಷಿದಾಬಾಧ್ನ ಶಹನಾ ಖಾಟೂನ್ ಎಂಬವರು 2021ರಿಂದ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇವರು 2024ರ ಜೂನ್ 6ರಂದು ಕಣ್ಮರೆಯಾಗಿದ್ದರು ಎನ್ನಲಾಗಿದೆ. ಈ ಇಬ್ಬರ ಫೋನ್ ಗಳ ಜಾಡು ಹಿಡಿದಾಗ ಸಂಶಯಾಸ್ಪದ ಚಟುವಟಿಕೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದು, ತನಿಖೆ ನಡೆಯುತ್ತಿದೆ.

ಇವರ ಫೋನ್ ಬಳಕೆ ಸ್ಥಳಗಳು ದೆಹಲಿ, ಹೌರಾ ಮತ್ತು ಬೆಹ್ರಾಂಪುರವನ್ನು ತೋರಿಸುತ್ತಿವೆ. ಫೋನ್ ದಾಖಲೆಗಳನ್ನು ಮತ್ತು ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದು, ವಿವಿಧ ರಾಜ್ಯಗಳಿಗೆ ಇವರು ಪ್ರಯಾಣ ಕೈಗೊಳ್ಳಲು ಏನು ಕಾರಣ ಎಂಬ ಅಂಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Click 👇

https://newsnotout.com/2024/07/darshan-kannada-news-evidences-collection-reaches-more-than-200
https://newsnotout.com/2024/07/kannada-news-fake-doctors-cought-in-bagalakot-ditrict-news-police

Related posts

ಶಾಲಾ ವಿದ್ಯಾರ್ಥಿನಿಯ ಫೋಟೋ ಡೀಪ್​ ಫೇಕ್​ ಮಾಡಿ ಜಾಲತಾಣದಲ್ಲಿ ಹಂಚಿಕೊಂಡ ಹುಡುಗರು..! 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಇನ್ಸ್ಟಾಗ್ರಾಮ್ ಗ್ರೂಪ್ ರಚನೆ..!

ಉಬರ್ ಬುಕ್ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್..! 62 ರೂಪಾಯಿ ಬದಲು 7.66 ಕೋಟಿ ರೂ. ಬಿಲ್..! ಈ ಬಗ್ಗೆ ಸಂಸ್ಥೆ ಹೇಳಿದ್ದೇನು..?

ಕಲ್ಲುಗುಂಡಿ: ಬೆಳ್ ಬೆಳಗ್ಗೆ ಹಂಚು ಎಗರಿಸಿದ ಕಳ್ಳ..!, ಅಂಗಡಿ ಮಾಲೀಕರಿಂದ ಪೊಲೀಸ್ ದೂರು