ಕ್ರೈಂಬೆಂಗಳೂರು

‘ಪೊಗರು’ (Pogaru) ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಜತೆ ನಟಿಸಿದ್ದ ಜೋ ಲಿಂಡ್ನರ್​ ವಿಧಿ ವಶ!

323

ನ್ಯೂಸ್‌ ನಾಟೌಟ್‌: ಫಿಟ್ನೆಸ್​ ಬಗ್ಗೆ ಅತಿಯಾಗಿ ಕಾಳಜಿ ವಹಿಸುವವರಿಗೆ ಶಾಕಿಂಗ್​ ಸುದ್ದಿಯೊಂದು ಬಂದಿದೆ. ಅಪಾರ ಜನಪ್ರಿಯತೆ ಹೊಂದಿದ್ದ, ಬಾಡಿ ಬಿಲ್ಡಿಂಗ್​​ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ 30 ವರ್ಷದ ಜೋ ಲಿಂಡ್ನರ್​ (Jo Lindner)  ನಿಧನರಾಗಿದ್ದಾರೆ.

ಕಬ್ಬಿಣದಂತಹ ದೇಹ ಹೊಂದಿದ್ದ ಅವರು ಏಕಾಏಕಿ ನಿಧನರಾಗಿರುವುದು ಅನುಮಾನಕ್ಕೆ ಕಾರಣ ಆಗಿದೆ. ರಕ್ತನಾಳದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೋ ಲಿಂಡ್ನರ್​ ನಿಧನದ ಸುದ್ದಿಯನ್ನು ಅವರ ಪ್ರೇಯಸಿ ಖಚಿತಪಡಿಸಿದ್ದಾರೆ. ಕನ್ನಡದ ‘ಪೊಗರು’ (Pogaru) ಸಿನಿಮಾದಲ್ಲಿ ಜೋ ಲಿಂಡ್ನರ್​ ನಟಿಸಿದ್ದರು. ನಟ ಧ್ರುವ ಸರ್ಜಾ (Dhruva Sarja) ಎದುರು ಅವರು ಫೈಟ್​ ಮಾಡಿದ್ದರು. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಅಬ್ಬರಿಸಿದ್ದ ಜೋ ಲಿಂಡ್ನರ್​ ಈಗ ನೆನಪು ಮಾತ್ರ.

ಜೋ ಲಿಂಡ್ನರ್​ ಅವರು ಅಪಾರ ಜನಪ್ರಿಯತೆ ಹೊಂದಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ಅವರು 87 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದರು. ‘ಜೋಎಸ್ತೆಟಿಕ್​’ ಎಂಬ ಹೆಸರಿನಿಂದ ಅವರು ಫೇಮಸ್​ ಆಗಿದ್ದರು. ಫಿಟ್ನೆಸ್​ ಬಗ್ಗೆ ಅವರು ಅನೇಕ ಟಿಪ್ಸ್​ ನೀಡುತ್ತಿದ್ದರು. ಬಾಡಿ ಬಿಲ್ಡಿಂಗ್​ ಕ್ಷೇತ್ರದಲ್ಲಿ ಅವರು ಅನೇಕರಿಗೆ ಮಾದರಿಯಾಗಿದ್ದರು. ಆದರೆ ಅವರು ಕೇವಲ 30ನೇ ವಯಸ್ಸಿನಲ್ಲಿ ಸಾವನ್ನಪ್ಪಿರುವುದು ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.

See also  ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್..! ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಪರಪ್ಪನ ಅಗ್ರಹಾರಕ್ಕೆ ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget