ನ್ಯೂಸ್ ನಾಟೌಟ್: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಸೈಪ್ರಸ್ (Cyprus) ದೇಶದ ಅತ್ಯುನ್ನತ ಪ್ರಶಸ್ತಿ `ಗ್ರ‍್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III’ (Grand Cross of the Order of Makarios III) ನೀಡಿ ಇಂದು(ಜೂ.16) ಗೌರವಿಸಲಾಗಿದೆ.
ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಪ್ರಧಾನಿ ಮೋದಿಗೆ ಸೈಪ್ರಸ್ ನ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸೈಪ್ರಸ್ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇದು ನರೇಂದ್ರ ಮೋದಿಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೂ ಸಂದ ಗೌರವವಿದು. ಇದು ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳಿಗೆ ಸಂದ ಗೌರವ. ಇದು ನಮ್ಮ ಸಂಸ್ಕೃತಿ, ಸಹೋದರತ್ವ ಮತ್ತು ವಸುಧೈವ ಕುಟುಂಬಕಂ ಎಂಬ ಸಿದ್ಧಾಂತಕ್ಕೆ ಸಂದ ಗೌರವ ಎಂದರು.
I extend my heartfelt gratitude to the Government and people of Cyprus for conferring upon me ‘The Grand Cross of the Order of Makarios III.’
This isn’t my honour. It is an honour for 140 crore Indians. I dedicate this award to the everlasting friendship between India and… pic.twitter.com/Q9p7LQGNfq
— Narendra Modi (@narendramodi) June 16, 2025
ನಾನು ಇದನ್ನು ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹ ಸಂಬಂಧಗಳು, ನಮ್ಮ ಮೌಲ್ಯಗಳು ಮತ್ತು ಪರಸ್ಪರ ತಿಳುವಳಿಕೆಗೆ ಅರ್ಪಿಸುತ್ತೇನೆ. ನಾನು ಈ ಗೌರವವನ್ನು ಎಲ್ಲಾ ಭಾರತೀಯರ ಪರವಾಗಿ ಬಹಳ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ನಮ್ಮ ಜನರಿಗೆ ನಮ್ಮ ಅಚಲ ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.
Prime Minister @narendramodi receives the Grand Cross of the Order of Makarios III
Prime Minister embraced the honour as a renewed commitment to strengthening and diversifying the partnership between India and Cyprus. He emphasized that the award was a symbol of the unwavering… pic.twitter.com/YML5xKwlIN
— PIB India (@PIB_India) June 16, 2025
ಆರ್ಡರ್ ಆಫ್ ಮಕರಿಯೋಸ್ III ಸೈಪ್ರಸ್ ನೀಡುವ ನೈಟ್ ಹುಡ್ ಗೌರವವಾಗಿದ್ದು, ಇದಕ್ಕೆ ಸೈಪ್ರಸ್ ನ ಮೊದಲ ಅಧ್ಯಕ್ಷ ಆರ್ಚ್ಬಿಷಪ್ ಮಕರಿಯೋಸ್ III ಅವರ ಹೆಸರಿಡಲಾಗಿದೆ. ಇದು ಗ್ರ‍್ಯಾಂಡ್ ಕಾಲರ್ ಪ್ರಶಸ್ತಿಯ ನಂತರ ಸೈಪ್ರಸ್‌ನ ಎರಡನೇ ಅತ್ಯುನ್ನತ ಶ್ರೇಣಿಯ ಪ್ರಶಸ್ತಿಯಾಗಿದ್ದು, ರಾಷ್ಟ್ರಾಧ್ಯಕ್ಷರು, ರಾಜತಾಂತ್ರಿಕರು, ಅಥವಾ ಸೈಪ್ರಸ್‌ಗೆ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.