ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ರಾಜತಾಂತ್ರಿಕ ತಿಕ್ಕಾಟದ ಬಳಿಕ ಮೊದಲ ಬಾರಿಗೆ ಕೆನಡಾ ದೇಶಕ್ಕೂ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ.
ಆಪರೇಷನ್ ಸಿಂಧೂರದ (Operation Sindoor) ಬಳಿಕ ಇದು ಪ್ರಧಾನಿಯ ಮೊದಲ ವಿದೇಶಿ ಪ್ರವಾಸವಾಗಿದೆ. ಈ ವೇಳೆ ಮೋದಿ, ಮೆಡಿಟರೇನಿಯನ್ ರಾಷ್ಟ್ರಗಳಾದ ಸೈಪ್ರಸ್ ಮತ್ತು ಕ್ರೊಯೇಷಿಯಾ ದೇಶಕ್ಕೂ ಭೇಟಿ ನೀಡಲಿದ್ದಾರೆ.
ಖಲಿಸ್ತಾನಿ ಸಮಸ್ಯೆಯಿಂದಾಗಿ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಇದನ್ನು ಪುನರ್ ಸ್ಥಾಪಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ಹಾಗಾಗಿ ಪ್ರಧಾನಿಯವರ ಈ ವಿದೇಶಿ ಪ್ರವಾಸದಲ್ಲಿ ಕೆನಡಾ ಭೇಟಿಯು ಮಹತ್ವದ್ದಾಗಿದೆ ಎನ್ನಲಾಗಿದೆ.
Over the next few days, will be visiting Cyprus, Canada and Croatia to attend various programmes, including bilateral meetings and multilateral engagements.https://t.co/CLhd5fMHH4
— Narendra Modi (@narendramodi) June 15, 2025
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನದ ಮೇರೆಗೆ, ಮೋದಿ ಜೂನ್ 16 ಮತ್ತು 17ರಂದು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾದ ಕನನಾಸ್ಕಿಸ್‌ಗೆ ಭೇಟಿ ನೀಡಲಿದ್ದಾರೆ. ಶೃಂಗಸಭೆಯ ಸಮಯದಲ್ಲಿ, ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳಲ್ಲಿ ಭಾರತದ ನಿಲುವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.