Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಆಟಿಕೆ ಕೊಡುವ ನೆಪದಲ್ಲಿ 10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ..! ಕತ್ತು ಸೀಳಿ 6ನೇ ಮಹಡಿಯಿಂದ ಎಸೆದ ಕ್ರೂರಿ..!

506

ನ್ಯೂಸ್ ನಾಟೌಟ್: 20 ವರ್ಷದ ಯುವಕನೊಬ್ಬ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕತ್ತು ಸೀಳಿ ಕೊಲೆ ಮಾಡಿ 6ನೇ ಮಹಡಿಯ ಕಿಟಕಿಯಿಂದ ಕೆಳಗೆಸೆದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಆಕೆಯ ಶವವನ್ನು ಅಪಾರ್ಟ್​ಮೆಂಟ್​ನ ಶೌಚಾಲಯದ ಕಿಟಕಿಯಿಂದ ಕೆಳಗೆ ಎಸೆದಿದ್ದಾನೆ. ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಜೊತೆಗೆ ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಬಯಲಾಗಿದೆ. ಗಂಟಲನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಮುಂಬ್ರಾದ ಹತ್ತಿರದ ಠಾಕೂರ್ಪಾಡ ಪ್ರದೇಶದ ನಿವಾಸಿಯು ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದ ಬಾಲಕಿಗೆ ಆಟಿಕೆಗಳನ್ನು ನೀಡುವ ಭರವಸೆಯೊಡ್ಡಿ ಕರೆದೊಯ್ದು ಕೃತ್ಯವೆಸಗಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ.

ಆಕೆಯನ್ನು ಅಪಾರ್ಟ್​ಮೆಂಟ್ ​ನ 6ನೇ ಫ್ಲೋರ್ ​ಗೆ ಕರೆದುಕೊಂಡು ಹೋಗಿ ಅಲ್ಲಿ ಬಲಾತ್ಕಾರ ನಡೆಸಿದ್ದಾನೆ, ಬಳಿಕ ಕತ್ತು ಸೀಳಿ, ಶೌಚಾಲಯದ ಕಿಟಕಿಯಿಂದ ಕೆಳಗೆ ದೇಹವನ್ನು ಎಸೆದಿದ್ದಾನೆ. ಪೊಲೀಸ್ ತನಿಖಾ ತಂಡವು ಕಟ್ಟಡದ ಪ್ರತಿಯೊಂದು ಫ್ಲಾಟ್ ಅನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಮನೆಯಲ್ಲಿ ಸ್ನಾನಗೃಹದ ಕಿಟಕಿ ತೆರೆದಿರುವುದು ಕಂಡುಬಂದಿದೆ, ಅಲ್ಲಿಂದ ಅವನು ಹುಡುಗಿಯನ್ನು ತಳ್ಳಿದ್ದಾನೆ ಎನ್ನುವುದಕ್ಕೆ ಸಾಕ್ಷ್ಯಗಳು ದೊರೆತಿವೆ.

ಕಟ್ಟಡದ ನಿವಾಸಿಯಲ್ಲದಿದ್ದರೂ ಆಕೆ ಅಲ್ಲಿಗೆ ಹೇಗೆ ಬಂದಳು ಎಂಬುದರ ಕುರಿತು ಮೊದಲು ತನಿಖೆ ಆರಂಭಿಸಲಾಗಿತ್ತು. ಮೇಲಿಂದ ಕೆಳಗೆ ಏನೋ ಬಿದ್ದಿರುವ ಶಬ್ದವೂ ಕೂಡ ಅಕ್ಕಪಕ್ಕದಲ್ಲಿದ್ದವರಿಗೆ ಕೇಳಿಸಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ..! ಮಗಳು ನೀಡಿದ ದೂರಿನಲ್ಲೇನಿದೆ..?

ಬ್ಯಾಂಕ್ ಗಳ ರೆಪೋ ದರ ಶೇ.6ಕ್ಕೆ ಇಳಿಕೆ..! ಆರ್ ​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾಹಿತಿ

See also  ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
  Ad Widget   Ad Widget   Ad Widget   Ad Widget   Ad Widget   Ad Widget   Ad Widget