ವೈರಲ್ ನ್ಯೂಸ್

ಬದುಕಿದ್ದಾಗಲೇ ಮಗಳಿಗೆ ಪಿಂಡ ಪ್ರದಾನ ಮಾಡಿದ ಪೋಷಕರು! ಯುವತಿಯ ನಿರ್ಧಾರಕ್ಕೆ ಆಕ್ರೋಶಗೊಂಡ ಕುಟುಂಬ ಸಂತಾಪ ಕಾರ್ಡ್‌ ಮುದ್ರಿಸಿ ವಿತರಿಸಿದ್ದೇಕೆ..?

272

ನ್ಯೂಸ್ ನಾಟೌಟ್ : ಮಗಳು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಅಸಮಾಧಾನಗೊಂಡ ಆಕೆಯ ಪೋಷಕರು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿ ಅವಳಿಗೆ ಪಿಂಡ ಪ್ರದಾನ ಮಾಡಿದ ಘಟನೆ ಜೂನ್ 12ರಂದು ವರದಿಯಾಗಿದೆ.
ಜಬಲ್‌ಪುರ ಮೂಲದ ಬ್ರಾಹ್ಮಣ ಕುಟುಂಬ ಭಾನುವಾರ ಪವಿತ್ರ ನರ್ಮದಾ ನದಿಯ ಗ್ವಾರಿಘಾಟ್‌ಗೆ ತೆರಳಿ ಅಲ್ಲಿ ಅಂತಿಮ ವಿಧಿಗಳನ್ನು ಮತ್ತು ಇತರ ಮರಣಾನಂತರದ ವಿಧಿಗಳನ್ನು ನೆರವೇರಿಸಿದರು.

ಯುವತಿಯೊಬ್ಬಳುಅಂತರ್ಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ಕೋಪಗೊಂಡ ಆಕೆಯ ಕುಟುಂಬವು ಮದುವೆ ಕಾರ್ಡ್‌ಗಳಿಗೆ ಪ್ರತಿಕ್ರಿಯೆಯಾಗಿ, “ಏಪ್ರಿಲ್ 2ರಂದು ಮಗಳು ಸಾವನ್ನಪ್ಪಿದ್ದಾಳೆ” ಎಂದು ಸಂಬಂಧಿಕರಿಗೆ ಮತ್ತು ಸುತ್ತಮುತ್ತಲಿನ ಜನರಿಗೆ ತಿಳಿಸಲು ಸಂತಾಪ ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಿದರು. ಮಗಳು ಜೀವಂತವಾಗಿರುವಾಗಲೇ ಅಂತ್ಯಕ್ರಿಯೆಯ ಔತಣ ಏರ್ಪಡಿಸಿ ಪಿಂಡ ಪ್ರದಾನ ಸೇರಿದಂತೆ ಅವರ ಅಂತಿಮ ವಿಧಿಗಳನ್ನು ಸಿದ್ಧಘಾಟ್‌ನಲ್ಲಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಬ್ರಾಹ್ಮಣ ಕುಟುಂಬದ ಹುಡುಗಿ 25 ವರ್ಷ ವಯಸ್ಸಿನ ಮುಸಲ್ಮಾನನನ್ನು ಮದುವೆಯಾಗಿದ್ದಾಳೆ. ಈ ಅಂತರ್ಧರ್ಮೀಯ ವಿವಾಹದಿಂದ ಈಗಾಗಲೇ ಅಸಮಾಧಾನಗೊಂಡಿರುವ ಆಕೆಯ ಕುಟುಂಬ ಮದುವೆಯ ನಂತರದ ಆರತಕ್ಷತೆಯ ಆಮಂತ್ರಣ ಪತ್ರಿಕೆಯಲ್ಲಿ “ಹಿಂದೂ ಹುಡುಗಿ ತನ್ನ ಧರ್ಮವನ್ನು ಬದಲಿಸಿ ಮುಸ್ಲಿಂ ಆಗಿದ್ದಾಳೆ” ಎಂದು ನಮೂದಿಸಲಾಗಿತ್ತು. ಈ ವಿಚಾರವಾಗಿ ಅಸಮಾಧಾನಗೊಂಡ ಮಹಿಳೆಯ ಕುಟುಂಬವು ಜಬಲ್ಪುರ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಲವ್ ಜಿಹಾದ್’ ಸಂಚು ರೂಪಿಸಿ ಮದುವೆ ನಡೆಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಆದಾಗ್ಯೂ, ಜಿಲ್ಲಾಡಳಿತದ ಪ್ರಕಾರ, ದಂಪತಿ ಜನವರಿ 4ರಂದು ವಿವಾಹವಾಗಿದ್ದಾರೆ. ಮದುವೆಯ ನೋಂದಣಿಗೆ ಮೊದಲು ಎರಡೂ ಕುಟುಂಬಗಳಿಗೆ ತಿಳಿಸಲಾಗಿದೆ ಎಂದು ಆಡಳಿತ ಹೇಳಿಕೊಂಡಿದೆ ಎಂದು ಮಾಹಿತಿ ನೀಡಲಾಗಿದೆ.

See also  ಎಲ್ಲಾ ವೃತ್ತಿಪರ ಕೋರ್ಸ್ ಗಳ ಪರೀಕ್ಷೆಗಳಿಗೆ ಆಧಾರ್​ ಲಿಂಕ್ ಕಡ್ಡಾಯ..! 'ಸೀಟ್​ ಬ್ಲಾಕಿಂಗ್' ದಂಧೆ ತಡೆಯಲು ಹೊಸ ಕ್ರಮ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget