ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪಿಕ್‌ ಪಾಕೆಟ್‌ ಮಾಡುತ್ತಿದ್ದ ಕಳ್ಳನಿಗೆ ಕಾದಿತ್ತು ಬಿಗ್‌ ಶಾಕ್‌..!ಪೊಲೀಸರು ಹಂಚಿಕೊಂಡ ವಿಡಿಯೋದಲ್ಲೇನಿದೆ..?

ನ್ಯೂಸ್ ನಾಟೌಟ್: ಪಿಕ್‌ ಪಾಕೆಟ್‌ಮಾಡುತ್ತಿದ್ದ ಕಳ್ಳನೊಬ್ಬ ರೆಡ್‌ ಹ್ಯಾಂಡಾಗಿ ನಡು ರಸ್ತೆಯಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈಗ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ದಿಲ್ಲಿ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಬೈಕ್‌ ಚಾಲಕನೋರ್ವ ಬೈಕ್‌ ಸ್ಟಾರ್ಟ್‌ ಮಾಡಲು ಯತ್ನಿಸುತ್ತಿರುತ್ತಾನೆ.

ಆಗ ಆತನ ಸಹಾಯಕ್ಕೆ ಬಂದ ಯುವಕನೋರ್ವ ಬೈಕ್‌ ಕಿಕ್‌ ಹೊಡೆದು ಸ್ಟಾರ್ಟ್‌ ಮಾಡುತ್ತಾ ಹಾಗೆಯೇ ಬೈಕ್‌ ಚಾಲಕನ ಪ್ಯಾಂಟಿನ ಜೇಬಿನಿಂದ ಮೆಲ್ಲಗೆ ಪರ್ಸ್‌ ಕದಿಯಲು ಯತ್ನಿಸುತ್ತಾನೆ. ಆಗ ಅದೆಲ್ಲೋ ಇದ್ದ ಪೊಲೀಸ್‌ ತಕ್ಷಣ ಅಲ್ಲಿಗೆ ಓಡಿ ಬಂದು ಕಳ್ಳನನ್ನು ರೆಡ್‌ಹ್ಯಾಂಡಾಗಿ ಹಿಡಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ದಿಲ್ಲಿಯ ಸದಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾನ್‌ಸ್ಟೇಬಲ್‌ ಸಚಿನ್‌ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಪದ್ಬಾಂದವನಂತೆ ಬಂದ ಕಾನ್‌ಸ್ಟೇಬಲ್‌ ಹಿಂದಿನಿಂದ ಬಂದು ಕಳ್ಳ ಕತ್ತು ಹಿಡಿದು ಆತನನ್ನು ಲಾಕ್‌ ಮಾಡಿರುವ ವಿಡಿಯೋ ನೋಡಿ ರಿಯಲ್‌ ಹೀರೋ ಎಂದು ಹಾಡಿ ಹೊಗಳಿದ್ದಾರೆ.

ಇನ್ನು ಕೆಲವರು ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳ್ಳತನ ನಡೆಯುತ್ತದೆ, ಪೊಲೀಸ್‌ ಬಂದು ಹಿಡಿಯುತ್ತಾರೆ ಎಂಬುದು ವಿಡಿಯೋ ಮಾಡುವವನಿಗೆ ಮೊದಲೇ ಗೊತ್ತಿತ್ತೇ ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದ್ದು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

Related posts

ಪೊಲೀಸರಿಂದ ಮಾಂಸ ಮಾರಾಟಗಾರರ ಮೇಲೆ ಅಮಾನುಷ ಹಲ್ಲೆ! ಮೂತ್ರ ವಿಸರ್ಜನೆ ಮಾಡಿ ಬೆದರಿಕೆ..!

ಸ್ವಚ್ಛ ಭಾರತದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳ ಮುಂದೆ ಭಾಷಣ ,ಪ್ರಥಮ ಸ್ಥಾನ ಪಡೆದು ವೈರಲ್ ಆದ ಉಡುಪಿಯ ಬಾಲಕಿ!

ನಾಳೆ (ಆಗಸ್ಟ್ 21) ಭಾರತ್ ಬಂದ್..? ಇಲ್ಲಿದೆ ಸಂಪೂರ್ಣ ಮಾಹಿತಿ