ಕರಾವಳಿಭಕ್ತಿಭಾವ

ಕೊರಗಜ್ಜನ ಆದಿ ಸ್ಥಳ ಕುತ್ತಾರುಪದವಿಗೆ ಕುಟುಂಬ ಸಮೇತ ಭೇಟಿ ನೀಡಿದ ಶಿವಣ್ಣ -ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು

176
Spread the love

ನ್ಯೂಸ್ ನಾಟೌಟ್ : ಕೊರಗಜ್ಜನ ಆದಿಸ್ಥಳವಾಗಿರುವ ಕುತ್ತಾರುಪದವು ದೈವಸ್ಥಾನಕ್ಕೆ ಖ್ಯಾತ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದರು.

ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಇಂದು ಬೆಳಗ್ಗೆ ಕುತ್ತಾರು ದೈವಸ್ಥಾನಕ್ಕೆ ಭೇಟಿ ನೀಡಿ ವೀಳ್ಯದೆಲೆ , ಚಕ್ಕುಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದರು. ನಟ ಶಿವಣ್ಣನ ಕಂಡು ಅಭಿಮಾನಿಗಳು ಸೆಲ್ಫಿಗೆ ಮುಗಿ ಬಿದ್ದರು.

ಸದ್ಯ ‘ ವೇದ’ ಚಿತ್ರ ತಂಡ ಮಂಗಳೂರಿನಲ್ಲಿದ್ದು, ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದು ವಿಶೇಷವಾಗಿದೆ.ದೇವಸ್ಥಾನಕ್ಕೆ ಭೇಟಿ ನೀಡಿದರು. ಹಾಗೂ ಇಂದು ಸಂಜೆ ವೇಳೆಗೆ ಪಣಂಬೂರು ಕಡಲ ಕಿನಾರೆಯಲ್ಲಿ ‘ವೇದ’ ಚಿತ್ರದ ಪ್ರಮೋಶನ್ ಕಾರ್ಯಕ್ರಮ ನಡೆಯಲಿದೆ.

See also  ತಲ್ವಾರ್ ದಾಳಿ ಯತ್ನ ಹಿನ್ನೆಲೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಬಿಗಿ ಭದ್ರತೆ
  Ad Widget   Ad Widget   Ad Widget   Ad Widget   Ad Widget   Ad Widget