ದೇಶ-ಪ್ರಪಂಚ

BBK10 Karthik Votes:ವಿನ್ನರ್ ಕಾರ್ತಿಕ್ ಪಡೆದ ವೋಟ್‌ ಎಷ್ಟು ಕೋಟಿ..! ವೋಟ್ಸ್‌ ರಿವೀಲ್‌ ಮಾಡಿದ ಕಿಚ್ಚ ಸುದೀಪ್..!

ನ್ಯೂಸ್‌ ನಾಟೌಟ್‌: ಬಿಗ್ ಬಾಸ್ ಈ ಶೋ ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿತ್ತು.ಬಿಗ್​​​ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿ ಸಿಂಗಲ್ ʻಸಿಂಹಿಣಿʼ ಎಂದೇ ಖ್ಯಾತಿ ಪಡೆದ ಸಂಗೀತಾ ಶೃಂಗೇರಿ ಅವರು ಈ ಸಲ ಟ್ರೋಫಿ ಗೆಲ್ಲೋದು ಪಕ್ಕಾ ಎಂದು ಅವರ ಅಭಿಮಾನಿಗಳು ಎನ್ನುತ್ತಿದ್ದರು. ಆದರೆ ಎಲ್ಲವೂ ಉಲ್ಟಾ ಹೊಡೆದಿದ್ದು, ಈ ಬಾರಿ ಕಾರ್ತಿಕ್ ಅವರು ಟ್ರೋಫಿ ಗೆಲ್ಲೋದರ ಮೂಲಕ ಎಲ್ಲರ ಪ್ರೀತಿ , ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

ಕನ್ನಡದ ಜನಪ್ರಿಯ​ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 10 ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿತ್ತು.ಜಗಳ, ಕಾಂಟ್ರವರ್ಸಿಗಳಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿತ್ತು.ಡೊಳ್ಳು ನಟ ಕಾರ್ತಿಕ್​ ಮಹೇಶ್​ ಬಿಗ್ ಬಾಸ್​ ಮನೆಗೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಬಳಿಕ ತಮ್ಮ ಆಟದ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು.

ಸೋಶಿಯಲ್ ಮೀಡಿಯಾದಲ್ಲಿ ಕಾರ್ತಿಕ್ ಮಹೇಶ್​ ಗೆಲ್ಲಬೇಕು ಎಂಬ ಅಭಿಯಾನವೇ ಶುರುವಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಅತಿ ಹೆಚ್ಚು ವೋಟ್ ಪಡೆದು ಕಾರ್ತಿಕ್ ವಿನ್ನರ್‌ ಆಗಿದ್ದಾರೆ. ಇನ್ನೂ ಡ್ರೋನ್‌ ಪ್ರತಾಪ್‌ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮೊದಲ ರನ್ನರ್‌ ಅಪ್‌ ಆಗಿದ್ದಾರೆ.ಬಿಗ್‌ ಬಾಸ್ ಗ್ರಾಂಡ್‌ ಫಿನಾಲೆ ವೇದಿಕೆ ಮೇಲೆ ವಿಜೇತರ ಹೆಸರು ಘೋಷಣೆಗೂ ಮುನ್ನ ಕಿಚ್ಚ ಸುದೀಪ್‌ ವಿನ್ನರ್‌ ಮತ್ತು ರನ್ನರ್‌ ಪಡೆದ ವೋಟ್‌ ರಿವೀಲ್‌ ಮಾಡಿದರು. ಬಿಗ್‌ ಬಾಸ್ ಕನ್ನಡ 10 ರ ವಿನ್ನರ್‌ ಕಾರ್ತಿಕ್‌ ಮಹೇಶ್‌ 2,97,39,904 ವೋಟ್‌ ಪಡೆದು ವಿಜೇತರಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ 2,20,04,202 ಮತಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

https://www.youtube.com/watch?v=1JnHTxLJRGA

Related posts

“ಲಿವ್ ಇನ್ ರಿಲೇಶನ್” ಗೆ ಇನ್ನು ಮುಂದೆ ನೋಂದಣಿ ಕಡ್ಡಾಯ..!ಮುಸ್ಲಿಮರು ಸೇರಿದಂತೆ ಯಾವ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ

15 ವರ್ಷದ ಹಿಂದೆ ಭೀಕರ ಉಗ್ರ ದಾಳಿಗೆ ಸಾಕ್ಷಿಯಾಗಿದ್ದ ಮುಂಬೈನ ತಾಜ್ ಹೋಟೆಲ್ ಗೆ ಬಾಂಬ್ ಬೆದರಿಕೆ..! ಪೊಲೀಸ್ ಕಂಟ್ರೋಲ್ ರೂಂಗೆ ಕರೆ..!

ಆಫ್ಘಾನಿಸ್ತಾನದಲ್ಲಿ ಅಮೆರಿಕಾ ವಿಮಾನದಿಂದ ಕೆಳಗೆ ಬಿದ್ದು ಸತ್ತಿದ್ದು ಓರ್ವ ಫುಟ್ಬಾಲ್ ಆಟಗಾರ !