ಕ್ರೈಂವೈರಲ್ ನ್ಯೂಸ್

ಫೊಟೋಗೆ ನಗುತ್ತಲೇ ಫೋಸ್ ಕೊಟ್ಟ ವಧು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದಿದ್ದೇಕೆ? ಅದ್ಧೂರಿ ಮದುವೆಯಲ್ಲಿ ಏನಿದು ಸಿನಿಮೀಯ ಟ್ವಿಸ್ಟ್?

238

ನ್ಯೂಸ್‌ ನಾಟೌಟ್‌: ಅದ್ಧೂರಿಯಾಗಿ ಆರತಕ್ಷತೆ ಮುಗೀತು. ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಹಸೆಮಣೆಯಿಂದ ಎದ್ದುಹೋದ ಪ್ರಕರಣ ತುಮಕೂರು ಜಿಲ್ಲೆ‌ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ಇಂದು(ಆ.27) ನಡೆದಿದೆ.

ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದ ವಧು ಹಸೆಮಣೆಯಿಂದ ಮೇಲೆದ್ದಿದ್ದಾಳೆ ಎನ್ನಲಾಗಿದ್ದು, ರಿಸೆಪ್ಷನ್​ನಲ್ಲಿ ನಗುನಗುತ್ತಲೇ ಫೋಟೋಗೆ ಫೋಸ್ ಕೊಟ್ಟಿದ್ದ ಆಕೆ ತಾಳಿ ಕಟ್ಟುವ ಮುಹೂರ್ತ ಸಮೀಪಿಸುತ್ತಿದ್ದಂತೆಯೇ ಯುವತಿ ಈ ಮದ್ವೆಯೇ ಬೇಡ ಎಂದು ಹಸೆಮಣೆಯಿಂದ ಮೇಲೆದ್ದಿರುವುದು ವಿಚಿತ್ರವಾಗಿತ್ತು.

ವಧು ಹೀಗೆ ಹೇಳುತ್ತಿದ್ದಂತೆಯೇ ಕೊಳಾಲದ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಮದುವೆ ಸಂಭ್ರಮದಲ್ಲಿ ನೆಂಟರು ಕ್ಷಣ ಅಚ್ಚರಿಪಟ್ಟಿದ್ದಾರೆ.
ಅಲ್ಲೇ ಮದುವೆ ಮಂಟಪದಲ್ಲಿ ವಧು ಹಾಗೂ ವರನ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ ಎನ್ನಲಾಗಿದೆ.

ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಯುವತಿಯ ಮದುವೆ ದೊಡ್ಡಬಳ್ಳಾಪುರ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಹುಡುಗನ ಜೊತೆ ನಿಶ್ಚಯವಾಗಿತ್ತು. ಅದರಂತೆ ಎರಡೂ ಕುಟುಂಬಸ್ಥರು ಮದ್ವೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಅಲ್ಲದೇ ನಿನ್ನೆ (ಆಗಸ್ಟ್ 26) ರಾತ್ರಿ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವೂ ಮುಗಿದಿತ್ತು.

ಇಬ್ಬರೂ ಜೋಡಿಗಳು ಸ್ಟೇಜ್​ ಮೇಲೆ ಒಬ್ಬರಿಗೊಬ್ಬರು ನಗುನಗುತ್ತಲೇ ಫೋಟೋಗೆ ಫೋಸ್ ನೀಡಿದ್ದರು. ಇನ್ನು ಎರಡೂ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಹ ನವ ಜೋಡಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿ ಹೋಗಿದ್ದರು. ಆದ್ರೆ, ಇನ್ನೇನು ಬೆಳಗ್ಗೆ ಮುಹೂರ್ತದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಈ ವರಸೆ ಶುರುಮಾಡಿದ್ದಾಳೆ.

ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದ್ದು, 2 ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ ಅಂತಿಮವಾಗಿ ಈ ಮದ್ವೆ ಗಲಾಟೆ ಕೊಳಾಲ‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಎರಡೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಮೂರು ತಿಂಗಳು ಮೊದಲೇ ಇಬ್ಬರಿಗೂ ಎಂಗಜ್ಮೆಂಟ್ ಆಗಿತ್ತು. ಒಂದು ಲಕ್ಷ ರೂ. ಖರ್ಚು ಮಾಡಿ ಎಂಗಜ್ಮೆಂಟ್ ಮಾಡಲಾಗಿತ್ತು. ಇದೀಗ ಏಕಾಏಕಿ ವಧು ಮದುವೆಯೇ ಬೇಡ ಎಂದಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ವಧು -ವರನ ಕುಟುಂಬಸ್ಥರ ನಡುವೆ ಸಂಧಾನ ಸರ್ಕಸ್ ನಡೆಯುತ್ತಿದೆ. ಈ ಸಂಧಾನ ಸಭೆಯಲ್ಲಿ ವಧು ಪ್ರಿಯಕರ ಸಹ ಹಾಜರಾಗಿದ್ದಾನೆ.

ಯಾವುದೇ ಕಾರಣಕ್ಕೂ ನಾನು ಮದುವೆಯಾಗುವುದಿಲ್ಲವೆಂದು ವಧು ಬಿಗಿಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದೇವೆ. ಈಗ ಮದುವೆ ಬೇಡ ಅಂದ್ರೆ ಹೇಗೆ ಎಂದು ವರನ ಕಡೆಯವರು ಆಕ್ರೋಶಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

See also  ಡಿಕೆ ಶಿವಕುಮಾರ್ ​​ರನ್ನು ಸಿಎಂ ಮಾಡಿ ತೋರಿಸುತ್ತೇವೆ ಎಂದ ಸ್ವಾಮೀಜಿ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget