ವೈರಲ್ ನ್ಯೂಸ್

ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಚಿಲ್ಲರೆ ಅಭಾವ! ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕಳವಳಕ್ಕೆ ಕಾರಣವೇನು?

ನ್ಯೂಸ್ ನಾಟೌಟ್ :  2000 ಮುಖಬೆಲೆಯ ನೋಟು ಹಿಂಪಡೆಯುವಿಕೆ ನಿರ್ಧಾರವು 2016 ರಲ್ಲಿ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಉಂಟಾಗಿದ್ದ ಕಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ದೇಶಾದ್ಯಂತ ಇರುವ ಪೆಟ್ರೋಲಿಯಂ ಡೀಲರ್‌ಗಳನ್ನು ಪ್ರತಿನಿಧಿಸುವ ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಎಐಪಿಡಿಎ) ಹೇಳಿದೆ.

ಗ್ರಾಹಕರು ಸಣ್ಣ ವಹಿವಾಟುಗಳಿಗೂ ಸಹ 2000 ರ ನೋಟುಗಳನ್ನೇ ಬಳಸಲು ಪ್ರಯತ್ನಿಸುತ್ತಿದ್ದಾರೆ, ಇದರಿಂದಾಗಿ ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಚಿಲ್ಲರೆಯ ಅಭಾವ ಉಂಟಾಗಿದೆ ಎಂದು ಸಂಘವು ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

 2,000 ರೂಪಾಯಿ ನೋಟು ಹಿಂತೆಗೆದುಕೊಳ್ಳುವಿಕೆಯನ್ನು ಘೋಷಿಸಿದಾಗಿನಿಂದ ನಗದು ವಹಿವಾಟಿನ ಸಂಖ್ಯೆ ಹೆಚ್ಚಾಗಿದೆ ಎಂದು ಎಐಪಿಡಿಎ ಅಧ್ಯಕ್ಷ ಅಜಯ್ ಬನ್ಸಾಲ್  ತಿಳಿಸಿದ್ದಾರೆ. 

“ರೂ 2,000 ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಗೊಳ್ಳುವ ಮೊದಲು, ನಮ್ಮ ನಗದು ಮಾರಾಟದಲ್ಲಿ 10% ಮಾತ್ರ ರೂ 2,000 ನೋಟಿನ ಮೂಲಕ ಸ್ವೀಕರಿಸುತ್ತಿದ್ದೆವು, ಆದರೆ ಈಗ ನಮ್ಮ ಔಟ್‌ಲೆಟ್‌ಗಳಲ್ಲಿ ಸ್ವೀಕರಿಸಿದ ಸುಮಾರು 90% ನಗದು ರೂ 2,000 ನೋಟುಗಳ ರೂಪದಲ್ಲಿದೆ” ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

ಈ ಅವಧಿಯಲ್ಲಿ ಮಾರಾಟದ ಹೆಚ್ಚಿದ ಕಾರಣ ಆದಾಯ ತೆರಿಗೆ ನೋಟೀಸ್ ಮತ್ತು ದಾಳಿಗಳ ಸಾಧ್ಯತೆಗಳ ಬಗ್ಗೆ ಬಗ್ಗೆ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ. ನೋಟು ಅಮಾನ್ಯೀಕರಣದ ನಂತರ ಹೆಚ್ಚಿನ ವಿತರಕರು ತಮ್ಮ ತಪ್ಪಿಲ್ಲದೆ ಆದಾಯ ತೆರಿಗೆ ನೋಟಿಸ್‌ಗಳನ್ನು ಸ್ವೀಕರಿಸಿದ್ದರು, ಅಂದು ಎದುರಿಸಿದ ಸನ್ನಿವೇಶವನ್ನು ಈ ಬಾರಿಯೂ ಎದುರಿಸಬೇಕಾಗಬಹುದು ಎಐಪಿಡಿಎ ಆತಂಕ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.

Related posts

ಹಲವಾರು ಯೋಧರ ಪ್ರಾಣ ರಕ್ಷಿಸಿದ ಸಿಆರ್ ಪಿಎಫ್ ಶ್ವಾನ..! ನಕ್ಸಲ್ ಚಟುವಟಿಕೆ ವೇಳೆ ಐಇಡಿ ಸ್ಫೋಟ, ಗಂಭೀರ ಗಾಯಗೊಂಡ ಶ್ವಾನಕ್ಕೆ ಚಿಕಿತ್ಸೆ

ಕನಸಲ್ಲಿ ಬಂದ ಚೌಡೇಶ್ವರಿ ದೇವಿಗಾಗಿ ದೇಗುಲವನ್ನೇ ನಿರ್ಮಿಸಿದ ಮುಸ್ಲಿಂ ಭಕ್ತ! , ಕೋಮು ಸೌಹಾರ್ದತೆಯ ಸಂದೇಶ ಸಾರಿದ ವ್ಯಕ್ತಿ ಯಾರು?

ಹೊಲದಲ್ಲಿ ನಿಧಿ ಇದೆ ಹುಡುಕಿ ಕೊಡುವುದಾಗಿ ನಂಬಿಸಿ‌ 28 ಲಕ್ಷ ರೂ. ದೋಚಿದ್ದ ಆರೋಪಿ..! ಜಮೀನು ಮಾಲಿಕರನ್ನು ಆತ ನಂಬಿಸಿದ ಪ್ಲಾನ್ ಹೇಗಿತ್ತು..?