ಕರಾವಳಿಕ್ರೈಂ

ಲಾರಿ ಚಾಲನೆಯಲ್ಲಿರುವಾಗ ಬಾಧಿಸಿದ ಮೂರ್ಛೆ ರೋಗ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಲಾರಿ !

434

ನ್ಯೂಸ್ ನಾಟೌಟ್: ಲಾರಿ ಚಾಲನೆಯಲ್ಲಿರುವಾಗಲೇ ಮೂರ್ಛೆ ರೋಗದಿಂದಾಗಿ ಚಾಲಕ ಅಸ್ವಸ್ಥಗೊಂಡು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಮಾರ್ಚ್ ೮ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬಿ.ಸಿ. ರೋಡ್‌ನಲ್ಲಿ ನಡೆದಿದೆ.

ಲಾರಿ ಮಂಗಳೂರು ಕಡೆಯಿಂದ ಹಾಸನಕ್ಕೆ ಹೋಗುತ್ತಿದ್ದ ವೇಳೆ ಬಿ.ಸಿ. ರೋಡ್‌ ತಲುಪುತ್ತಿದ್ದಂತೆ ಚಾಲಕನಿಗೆ ಮೂರ್ಚೆ ರೋಗ ಕಾಣಿಸಿಕೊಂಡಿದೆ. ಈ ವೇಳೆ ಲಾರಿ ಪೆಟ್ರೋಲ್ ಬಂಕ್ ಒಂದಕ್ಕೆ ನುಗ್ಗಿ ಪೆಟ್ರೋಲ್ ಹಾಕುತ್ತಿದ್ದ ಕಾರಿನ ಜತೆಗೆ ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಹಾಗೂ ನ್ಯಾನೋ ಕಾರೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಲಾರಿ ಚಾಲಕನನ್ನು ಲಕ್ಷಣ್ ಎಂದು ಗುರುತಿಸಲಾಗಿದೆ. ಈತನನ್ನು ಸ್ಥಳೀಯ ಆಸ್ಪತ್ರಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

See also  ಯುವಕ ಹಠಾತ್ ನಾಪತ್ತೆ, ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಹೋದರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget