ದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

ಶಾಕ್… ಶಾಕ್… ವಾಹನ ಸವಾರರಿಗೆ ಬಿಟ್ಟಿ ಗ್ಯಾರಂಟಿಗಳ ಬಿಸಿ..! ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಪ್ರತಿ ಲೀ. 3 ರೂ. ಏರಿಕೆ..!

162

ನ್ಯೂಸ್ ನಾಟೌಟ್: ಬಿಟ್ಟಿ ಭಾಗ್ಯಗಳಿಂದ ರಾಜ್ಯದ ವಾಹನ ಸವಾರರಿಗೆ ಮತ್ತಷ್ಟು ಬರೆ ಬಿದ್ದಿದ್ದು, ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ಒಂದೂವರೆ ವರ್ಷದಿಂದ ತೈಲ ಬೆಲೆ ಹೆಚ್ಚಳವಿಲ್ಲದೆ ಆರಾಮದಲ್ಲಿದ್ದ ವಾಹನ ಸವಾರರಿಗೆ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 3 ರೂಪಾಯಿ ಹೆಚ್ಚಳವಾಗಿದೆ.

ಮಂಗಳೂರಿನಲ್ಲಿ 99.01 ರೂ ಇದ್ದ ಪೆಟ್ರೋಲ್ ಬೆಲೆ ಇದೀಗ 102.01ಗೆ ಹೆಚ್ಚಳವಾಗಿದೆ. ಪ್ರತಿ ಲೀಟರ್ ಗೆ 85.15 ರೂ ಇದ್ದ ಡೀಸೆಲ್ ಬೆಲೆ ಇದೀಗ 88.13 ರೂ ಆಗಿದೆ ಎಂದು ವರದಿ ತಿಳಿಸಿದೆ. 2020 ಏಪ್ರಿಲ್‌ನಲ್ಲಿ ಹೆಚ್ಚಳವಾಗಿದ್ದ ಮಾರಾಟ ತೆರಿಗೆ 2021ರ ನವೆಂಬರ್‌ನಲ್ಲಿ ಕಡಿಮೆಯಾಗಿತ್ತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಮೀಸಲಿಟ್ಟಿದ್ದರಿಂದ ಇತರೆ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ನೀಗಿಸಲು ರಾಜ್ಯ ಸರ್ಕಾರ ಇದೀಗ ತೈಲ ಬೆಲೆಯಲ್ಲಿ ತಲಾ ಮೂರು ರೂ. ಹೆಚ್ಚಳ ಮಾಡಿ ಸಾರ್ವಜನಿಕರಿಗೆ ಬರೆ ಹಾಕಿದೆ.

Click 👇

https://newsnotout.com/2024/06/film-chember-issue-banning-darshan-and-visiting
https://newsnotout.com/2024/06/darshan-and-gang-issue-today-future-decisions-have-been-decided
https://newsnotout.com/2024/06/darshan-mb-patil-kannada-news-agriculture-department
See also  ಜನರ ಆಶೀರ್ವಾದದಿಂದ ನಿಸ್ವಾರ್ಥ ಸೇವೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget