ಕ್ರೈಂರಾಜ್ಯವೈರಲ್ ನ್ಯೂಸ್

ಪೆಟ್ರೋಲ್‌ ಬಾಂಬ್‌ ಹಾಕಿ ಇಡೀ ಕುಟುಂಬವನ್ನೇ ಹತ್ಯೆ ಮಾಡಲು ಯತ್ನ..! ಮನೆಯಲ್ಲಿದ್ದ 7 ಜನ ಬಚಾವಾದದ್ದೇಗೆ..?

209

ನ್ಯೂಸ್ ನಾಟೌಟ್: ಜಮೀನು ವ್ಯಾಜ್ಯ ಹಿನ್ನೆಲೆಯಲ್ಲಿ ಪೆಟ್ರೋಲ್ ಬಾಂಬ್​ ಹಾಕಿ ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನಿಸಿರುವಂತಹ ಘಟನೆ ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗುಂಡೆರಾವ್ ಎಂಬವರ ಕುಟುಂಬದ ಸದಸ್ಯರ ಹತ್ಯೆಗೆ ಶಿವಲಿಂಗಪ್ಪ ಕರಿಕಲ್ ಯತ್ನಿಸಿದ್ದಾರೆ. ಮನೆಯಲ್ಲಿ 7 ಜನರಿದ್ದರು ಎನ್ನಲಾಗಿದೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಕಿ ಹಚ್ಚುತ್ತಿದ್ದಂತೆ ಕುಟುಂಬ ಸದಸ್ಯರು ಬಾಗಿಲು ಬಂದ್ ಮಾಡಿಕೊಂಡಿದ್ದರು. ಮನೆ ಬಾಗಿಲು ಮುರಿದು ಕುಟುಂಬಸ್ಥರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಹೀಗಾಗಿ ಭಾಗಶಃ ಮನೆ ಸುಟ್ಟು ಕರಕಲಾಗಿದೆ. ಸದ್ಯ ಅಸ್ವಸ್ಥಗೊಂಡ ಕುಟುಂಬಕ್ಕೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಗುಂಡೆರಾವ್ ​ಗೆ ಶಿವಲಿಂಗಪ್ಪ 4 ಎಕರೆ ಜಮೀನು ಮಾರಾಟ ಮಾಡಿದ್ದ. ಶಿವಲಿಂಗಪ್ಪ 4 ವರ್ಷದ ಹಿಂದೆ 13 ಲಕ್ಷ ರೂ. ಅಡ್ವಾನ್ಸ್ ಪಡೆದಿದ್ದರು. ಬಳಿಕ ಜಮೀನು ನೋಂದಣಿ ಮಾಡಿಕೊಡುವ ವಿಚಾರದಲ್ಲಿ ವಿವಾದ ಉಂಟಾಗಿ ಜಮೀನು ನೋಂದಣಿ ಮಾಡಿಕೊಡಲು ಶಿವಲಿಂಗಪ್ಪ ವಿರೋಧಿಸಿದ್ದಾರೆ. ಈ ವೇಳೆ ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಜಗಳ ಉಂಟಾಗಿದೆ. ಇದು ಜೋರಾಗಿ ಪ್ರತೀಕಾರಕ್ಕೆ ತಿರುಗಿ ಈ ಕೃತ್ಯ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

Click

https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/belthangady-puc-girl-nomore-viral-news-marriage-issue-d/
https://newsnotout.com/2024/11/ksrtc-kananda-news-60-students-7-teachers-viral-news-f/
https://newsnotout.com/2024/11/samsath-kannada-news-rahul-priyanka-sonia-oath-taking-viral-news/
https://newsnotout.com/2024/11/centrle-jail-viral-news-police-anita-cctv-issue/
See also  ಪ್ರೀತಿಸಿ ಮದುವೆಯಾದ ಪತ್ನಿಯನ್ನೇ 25ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಪತಿ..! ಭೀಕರ ಘಟನೆಗೆ ಸಾಕ್ಷಿಯಾದ ಬಾಡಿಗೆ ಮನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget