ಕರಾವಳಿ

ಮಂಗಳೂರಿಗೆ ಹೋಗಿದ್ದ ವ್ಯಕ್ತಿ ನಾಪತ್ತೆ, ಬೆಳ್ಳಾರೆಯಲ್ಲಿ ಪ್ರತ್ಯಕ್ಷ

ಬೆಳ್ಳಾರೆ: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆಗೆ ಬಾರದೆ ನಾಪತ್ತೆಯಾಗಿ ಸುಮಾರು ಹೊತ್ತಿನ ಬಳಿಕ ಪತ್ತೆಯಾದ ಘಟನೆ ವರದಿಯಾಗಿದೆ.

ಸುಳ್ಯ ತಾಲೂಕು ಬೆಳ್ಳಾರೆ ಠಾಣಾ ವ್ಯಾಪ್ತಿಯ  ಐವರ್ನಾಡಿನ ಸದಾಶಿವ ಪಾಲೆಪ್ಪಾಡಿ ಎಂಬವರು ಕಾಣೆಯಾಗಿದ್ದರು. ಸೆ.2 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದ  ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬರಲಿಲ್ಲ ಎನ್ನಲಾಗಿದೆ.   ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅವರು ಬೆಳ್ಳಾರೆಯಲ್ಲಿ ಪತ್ತೆಯಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.

Related posts

ಸುಳ್ಯದ ರೆಸಿಡೆನ್ಸಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ

ಕಡಬ:ಔಷಧಿ ತರಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ,ಪತ್ತೆಗಾಗಿ ಮನವಿ

ನಾಪತ್ತೆಯಾಗಿದ್ದ ಯುವತಿಯ ಶವ ನದಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ