ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಬುದ್ಧಿಮಾಂದ್ಯ ಮಗುವನ್ನು ಬಿಟ್ಟು ದಂಪತಿ ಭಾರತಕ್ಕೆ ಪರಾರಿ! ಪೋಷಕರೇ ಕೊಲೆ ಮಾಡಿದರಾ?

ನ್ಯೂಸ್ ನಾಟೌಟ್ :  ನವೆಂಬರ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಾಪತ್ತೆಯಾಗಿರುವ 6 ವರ್ಷದ ಬುದ್ಧಿಮಾಂದ್ಯ ಮಗುವನ್ನು ಅಮೇರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಆ ಮಗು ಬದುಕಿದೆ ಅನ್ನುವುದರಲ್ಲಿ ನಂಬಿಕೆಯಿಲ್ಲ, ಅದರ ಶವಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಹೀಗಾಗಿ ಪರಾರಿಯಾಗಿರುವ ತಾಯಿ ಸಿಂಡಿ ರೋಡ್ರಿಗಸ್‌ ಸಿಂಗ್‌, ತಂದೆ ಅರ್ಷದೀಪ್‌ ಸಿಂಗ್‌ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದ್ದೇವೆ, ಮಗುವನ್ನು ಸಾಕಲು ಆಗದೆ ಅವರು ಕೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಅಮೆರಿಕದ ಎವರ್ಮನ್‌ ಪೊಲೀಸರು ಹೇಳಿದ್ದಾರೆ.

ಬುದ್ಧಿಮಾಂದ್ಯ ಬಾಲಕ ನೋಯೆಲ್‌ ರೋಡ್ರಿಗಸ್‌ ಅಲ್ವಾರೆಜ್‌ ವಿಶೇಷ ಕಾಳಜಿ ಅಗತ್ಯವಿದ್ದ ಬಾಲಕ. ಆತ ನಾಪತ್ತೆಯಾದ ಮೇಲೆ ತಂದೆ ತಾಯಿಯೂ ಅಮೆರಿಕವನ್ನು ತೊರೆದಿದ್ದಾರೆ ಎಂದು ಅಮೇರಿಕದ ಸ್ಥಳೀಯ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Related posts

Harish poonja: ಹರೀಶ್ ಪೂಂಜಾ ಮನೆಯಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ವಾಕ್ಸಮರ..! ಶಾಸಕರನ್ನು ಅರೆಸ್ಟ್ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ ಹೊಣೆ ಎಂದ ಬಿ.ವೈ ವಿಜಯೇಂದ್ರ..!

ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ಮೃತಪಟ್ಟ ಅಭಿಮಾನಿಗಳ ಮನೆಗೆ ಯಶ್ ಭೇಟಿ ನೀಡಲಿದ್ದಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಲ್ಚರ್ಪೆ ಕಸದ ರಾಶಿ ಮಳೆ ನೀರಿನ ಜೊತೆ ಪಯಸ್ವಿನಿ ನದಿ ಸೇರುತ್ತಿದೆಯೇ..? ಸುಳ್ಯ ನಗರ ಪಂಚಾಯತ್ ಮರ್ಯಾದೆ ಹರಾಜಾಗೋದನ್ನ ತಡೆಯಲು ನಾವೇ ನಿಂತು ಕೆಲಸ ಮಾಡಬೇಕಿದೆ ಎಂದು ವಿನಯ್ ಕುಮಾರ್ ಕಂದಡ್ಕ ಬೇಸರ ವ್ಯಕ್ತಪಡಿಸಿದ್ದೇಕೆ..?