ಕರಾವಳಿಸುಳ್ಯ

ಪೆರಾಜೆ:ಕಾರುಗಳೆರಡರ ನಡುವೆ ಭೀಕರ ಅಪಘಾತ,ಗಾಯಾಳುಗಳು ಸುಳ್ಯ ಆಸ್ಪತ್ರೆಗೆ ದಾಖಲು

239

ನ್ಯೂಸ್ ನಾಟೌಟ್ : ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಸುಳ್ಯ ಸಮೀಪದ ಪೆರಾಜೆ ಎಂಬಲ್ಲಿ ನಡೆದಿದೆ.ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಚಲಿಸುತ್ತಿದ್ದ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸುಳ್ಯ ಪೆರಾಜೆಯ ಅಂಜಿಕಾರು ಪಾಲಡ್ಕ ಬಳಿ ಈ ಘಟನೆ ಸಂಭವಿಸಿದ್ದು,ಎರಡು ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ.ಕೆಲವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದರೆ,ಇನ್ನುಳಿದವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಶಿಫ್ಟ್ ಕಾರು ನಜ್ಜುಗುಜ್ಜಾಗಿದ್ದು,ಇದರಲ್ಲಿ ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಬಿಯರ್ ಟಿನ್ ಮುಚ್ಚಳಕ್ಕೆ ಸಿಲುಕಿಕೊಂಡ ಹಾವನ್ನು ರಕ್ಷಿಸಿದ ಬನ್ನೂರಿನ ಉರಗ ತಜ್ಞ
  Ad Widget   Ad Widget     Ad Widget   Ad Widget   Ad Widget   Ad Widget