ಕೊಡಗುಕ್ರೈಂ

ಪೆರಾಜೆ: ಶಾಲಾ ಪ್ರವಾಸದ ಬಸ್ ಗಳ ನಡುವೆ ಅಪಘಾತ, ಅದೃಷ್ಟವಶಾತ್ ಸಂಭವನೀಯ ದುರಂತದಿಂದ ಮಕ್ಕಳು ಪಾರು

ನ್ಯೂಸ್ ನಾಟೌಟ್: ಪೆರಾಜೆ ಸಮೀಪ ಶಾಲಾ ಮಕ್ಕಳನ್ನು ಹೊತ್ತು ಪ್ರವಾಸ ಸಾಗುತ್ತಿದ್ದ ಬಸ್ ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ (ನ.30) ನಡೆದಿದೆ.

ಕೇರಳದಿಂದ ಶಾಲಾ ಮಕ್ಕಳ ಪ್ರವಾಸ ಹೊರಟ್ಟಿದ್ದ ಎರಡು ಬಸ್ ಗಳು ಒಂದರ ಹಿಂದೆ ಒಂದು ಹೋಗುತ್ತಿದ್ದವು, ಈ ವೇಳೆ ಪೆರಾಜೆ ಮಾರ್ಗವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಸುಳ್ಯ ಬದಿಯಿಂದ ತೆರಳುತ್ತಿದ್ದ ಕಾರೊಂದು ಅಡ್ಡ ರಸ್ತೆಗೆ ತಿರುವು ತೆಗೆದುಕೊಂಡಿದೆ. ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಶಾಲಾ ಪ್ರವಾಸದ ಬಸ್ ನ ಚಾಲಕ ಬ್ರೇಕ್ ಹಾಕಿದ್ದಾರೆ.

ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಶಾಲಾ ಪ್ರವಾಸದ ಬಸ್ ಚಾಲಕನಿಗೆ ನಿಯಂತ್ರಣ ಸಿಗದೆ ಮುಂದಿನ ಶಾಲಾ ಪ್ರವಾಸದ ಬಸ್ ಗೆ ಗುದ್ದಿದ್ದಾನೆ. ಇದರಿಂದ ಎರಡೂ ಬಸ್ ಗಳು ಸ್ವಲ್ಪ ಮಟ್ಟಿಗೆ ಜಖಂ ಆಗಿದೆ. ಆದರೆ ಒಳಗಡೆ ಇದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

https://newsnotout.com/2023/11/rahul-gandhi-translation-issue-and-telangana/

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಶಾಪಿಂಗ್‌ ಮಾಲ್‌ ನಲ್ಲಿ ಆಟಿಕೆ ರೈಲು ಪಲ್ಟಿಯಾಗಿ 10ರ ಬಾಲಕ ಸಾವು..! ಇಲ್ಲಿದೆ ವೈರಲ್ ವಿಡಿಯೋ

ಬಸ್‌ ಸ್ಟ್ಯಾಂಡ್‌ನಲ್ಲಿ ನವಜಾತ ಶಿಶುವನ್ನು ಬಿಟ್ಟು ದಂಪತಿ ಪರಾರಿ..!

ಸಿಎಂ ಕಾರ್ಯಕ್ರಮ ಹಿನ್ನೆಲೆ, ಒಕ್ಕಲಿಗರ ಪ್ರೀಮಿಯರ್ ಲೀಗ್ 2024 ಅಂತರ್ ಜಿಲ್ಲಾ ಕ್ರಿಕೆಟ್ ಕೂಟ ಮುಂದೂಡಿಕೆ, ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ ನೋಡಿ