ಕೊಡಗು

ಪೆರಾಜೆ ಬಳಿ ಬೈಕ್‌-ಜೀಪು ಭೀಕರ ಅಪಘಾತ, ಸವಾರನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಪೆರಾಜೆಯ ಸಮೀಪವಿರುವ ಪೆಟ್ರೋಲ್ ಪಂಪ್ ಎದುರು ಬೈಕ್ –ಜೀಪು ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ರಭಸದಿಂದ ಡಿಕ್ಕಿಯಾಗಿರುವ ಹಿನ್ನೆಲೆಯಲ್ಲಿ ಬೈಕ್ ಸವಾರನ ಎರಡೂ ಕೈಗಳಿಗೆ ಗಂಭೀರ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಬೈಕ್‌ನಲ್ಲಿ ಸೊಸೈಟಿ ಉದ್ಯೋಗಿ  ಅಲೆಟ್ಟಿ ನಿವಾಸಿ ಧನಂಜಯ ಬರುತ್ತಿದ್ದರು. ಈ ವೇಳೆ ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಬರುತ್ತಿದ್ದ ಹರೀಶ್‌ ಅವರ ಜೀಪು ಗುದ್ದಿದೆ. ಜೀಪು ಚಾಲಕ ಕಂಟೈನಾರ್  ಲಾರಿಯನ್ನು ಓವರ್‌ ಟೆಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಭೀಕರ ದೃಶ್ಯ ಎದುರಿನ ಪೆಟ್ರೋಲ್ ಪಂಪ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್‌ ಆಗುತ್ತಿದೆ.

Related posts

ಕೊಡಗು: ವ್ಯಾಪಾರಿ ಮೇಲೆ ಗುಂಡಿನ ದಾಳಿ! ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ

ಮಡಿಕೇರಿ:ಅನಾಥ ಶವದ ಮುಂದೆ ಇತ್ತು ಲಕ್ಷಗಟ್ಟಲೆ ಹಣ,ಬೆರಗಾದ ಸ್ಥಳೀಯರು…

ಕೊಡಗು: ಗಾಳಿ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬ, ಮರಗಳು