ಕ್ರೈಂ

ಪೆರಾಜೆ: ಐ20 ಕಾರು ಪಲ್ಟಿ, ಇಬ್ಬರಿಗೆ ಗಾಯ

495

ಪೆರಾಜೆ: ಇಲ್ಲಿನ ಪಾಲಡ್ಕ ಎಂಬಲ್ಲಿ ಐ20 ಕಾರೊಂದು ಪಲ್ಟಿಯಾಗಿದ್ದು ಮಹಿಳೆ ಸೇರಿದಂತೆ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಇದೀಗ ನಡೆದಿದೆ.

ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಪಾಲಡ್ಕ ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಕ್ಕೆ ಹೋಗಿ ರಕ್ಷಣಾ ಡಿವೈಡರ್ ಗೆ ಗುದ್ದಿದೆ. ಕಾರಿನಲ್ಲಿ ಮಡಿಕೇರಿ ಮೂಲದ ಮೂರು ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಮಹಿಳೆ ಹಾಗೂ ಕಾರು ಚಾಲಕನಿಗೆ ಅಲ್ಪ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮಡಿಕೇರಿ ಮೂಲದವರು ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರಾದ ತೇಜೇಸ್ ಚಿದ್ಗಲ್, ಯೂಸುಫ್ ಅಂಜಿಕಾರು, ಸಲೀಂ ಅಂಜಿಕಾರು, ಅಶ್ವಥ್ ಕಾಸ್ಪಾಡಿ, ರಾಜ್ ಗೋಪಾಲ್ ಸೇರಿದಂತೆ ಮತ್ತಿತರರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು. ಇದೇ ಸ್ಥಳದಲ್ಲಿ ಈ ಹಿಂದೆಯೂ ಎರಡು ಮೂರು ಅಪಘಾತ ನಡೆದಿದೆ. ಇಷ್ಟಾದರೂ ಎಚ್ಚೆತ್ತುಕೊಂಡು ಸಂಬಂಧಿತ ಅಧಿಕಾರಿಗಳು ಇನ್ನೂ ಒಂದು ಸೂಚನಾ ಫಲಕವನ್ನು ಇಲ್ಲಿ ಅಳವಡಿಸದಿರುವುದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ರೇವ್ ಪಾರ್ಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget