ಕರಾವಳಿಕೊಡಗುಕ್ರೈಂ

ಪೆರಾಜೆ ಬಳಿ ಪ್ರತ್ಯೇಕ ಎರಡು ಅಪಘಾತ, ಹಲವರಿಗೆ ಗಾಯ

ನ್ಯೂಸ್ ನಾಟೌಟ್ : ಪೆರಾಜೆ ಬಳಿ ಇಂದು (ಶನಿವಾರ ಏಪ್ರಿಲ್ ೧) ಎರಡು ಪ್ರತ್ಯೇಕ ಅಪಘಾತ ನಡೆದಿರುವ ಬಗ್ಗೆ ವರದಿಯಾಗಿದೆ.

ಸ್ಕಾರ್ಫಿಯೋ ಕಾರೊಂದು ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಪ್ರಕರಣದಲ್ಲಿ ಇಟಿಯೋಸ್ ಕಾರೊಂದು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಅಪಘಾತಕ್ಕೆ ತುತ್ತಾಗಿದೆ. ಈ ಘಟನೆಯಲ್ಲಿ ಕಾರಿನ ಹಿಂಬಂದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಅತಿಯಾದ ವೇಗದಿಂದ ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಸದ್ಯ ಅವರು ಸುಳ್ಯದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Related posts

ಹಿಂದೂ ಯುವತಿ-ಮುಸ್ಲಿಂ ಯುವಕನಿದ್ದ ಕಾರಿನ ಮೇಲೆ ಹಿಂದೂ ಕಾರ್ಯಕರ್ತರ ದಾಳಿ

ಕ್ಯಾನ್ಸರ್ ರೋಗ ಬರುವುದು ಹೇಗೆ? ಅದನ್ನು ಹೇಗೆ ತಡೆಗಟ್ಟಬಹುದು?

ಪುತ್ತೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಅಣಿಯಾಗುತ್ತಿರುವ ಬಿಜೆಪಿ! ಆಶಾ ತಿಮ್ಮಪ್ಪ ಪರ ಭರ್ಜರಿ ಪ್ರಚಾರ ಸಭೆ