Uncategorized

ಪೇರಡ್ಕ ಸೇತುವೆ ಮುಳುಗಡೆ, ದ್ವೀಪದಲ್ಲಿ ಸಿಲುಕಿದ ಜನ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಗೂನಡ್ಕ ಸಮೀಪದ ಪೇರಡ್ಕ ಎಂಬಲ್ಲಿ ಮಳೆಯಿಂದ ಸೇತುವೆಯೊಂದು ಮುಳುಗಿ ಹೋಗಿದೆ. ಪರಿಣಾಮ ಮುಖ್ಯ ರಸ್ತೆಗೆ ಸಂಪರ್ಕಿಸಬೇಕಾದ ಎಲ್ಲ ದಾರಿಗಳು ಮುಚ್ಚಿ ಹೋಗಿದ್ದು ಜನ ದ್ವೀಪದಲ್ಲಿ ಸಿಲುಕಿಕೊಂಡಂತಾಗಿದ್ದಾರೆ. ಕಲ್ಲುಗುಂಡಿ, ಅರಂತೋಡು, ಪೆರಾಜೆ, ಸುಳ್ಯಕ್ಕೆ ಹೋಗುವ ಜನರು ಈಗ ಅತಂತ್ರ ಸ್ಥಿತಿಗೆ ಬಂದು ತಲುಪಿದ್ದಾರೆ. ಅದರಲ್ಲೂ ಕಲ್ಲುಗುಂಡಿಯ ಚರ್ಚ್ ಶಾಲೆ, ಗೂನಡ್ಕದ ಮಾರುತಿ ಪಬ್ಲಿಕ್ ಇಂಟರ್ ನ್ಯಾಷನಲ್ ಸ್ಕೂಲ್ , ತೆಕ್ಕಿಲ್ ಶಾಲೆ ಹಾಗೂ ಅರಂತೋಡು ಪಿಯು ಕಾಲೇಜಿಗೆ ತೆರಳುವ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳವರೆಗೆ ಎಲ್ಲರೂ ಈಗ ಮನೆಗೂ, ಶಾಲೆಗೂ ಸಲೀಸಾಗಿ ತೆರಳಲಾಗದೆ ಸಂಕಟಕ್ಕೆ ಒಳಗಾಗಿದ್ದಾರೆ. ಪೋಷಕರು ನೀರಿನಲ್ಲಿ ಮಕ್ಕಳನ್ನು ಎತ್ತಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿದ್ದಾರೆ. ಇದು ಅಪಾಯಕ್ಕೆ ದಾರಿಯೂ ಆಗಿದ್ದು ಏನಾದರೂ ಹೆಚ್ಚು ಕಮ್ಮಿ ಆದರೆ ಅನ್ನುವ ಭಯದ ವಾತಾವರಣವೂ ಇದೆ. 

ಕೂಡಲೇ ಬದಲಿ ಮಾರ್ಗವನ್ನು ಮಾಡಿಕೊಡಿ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಒತ್ತಾಯಿಸಿದ್ದಾರೆ. ನ್ಯೂಸ್ ನಾಟೌಟ್ ತಂಡದ ಜತೆಗೆ ಮಾತನಾಡಿದ ಅವರು, ಕಳೆದ 1 ತಿಂಗಳಿನಿಂದ ಈ ಭಾಗದ  ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಇಲ್ಲಿನ ಪಯಸ್ವಿನಿ ನದಿ ಉಕ್ಕಿ ಹರಿದಾಗ ರಸ್ತೆ ಹಾಗೂ ಸೇತುವೆ ಮೇಲೆ ಬರುತ್ತದೆ. ಇದರಿಂದ ಸಂಪರ್ಕ ರಸ್ತೆಗಳು ಬಂದ್ ಆಗುತ್ತವೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಔಷಧಕ್ಕೆ ತೆರಳುವ ವೃದ್ಧರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ಇಲ್ಲಿಗೆ ಪೆರುಂಗೋಡಿ ಪೇರಡ್ಕ ಮಾರ್ಗದಲ್ಲಿ ಮಣ್ಣಿನ ರಸ್ತೆ ಇದ್ದು ಅದನ್ನು ಜಿಲ್ಲಾಡಳಿತ ತುರ್ತಾಗಿ ಅಭಿವೃದ್ಧಿಪಡಿಸಿ ಈ ಭಾಗದಲ್ಲಿ ವಾಸವಾಗಿರುವ 75ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ತಿಳಿಸಿದ್ದಾರೆ.

Related posts

ರಾತ್ರೋರಾತ್ರಿ 12 ಬೈಕ್ ಗಳು ಬೆಂಕಿಗೆ ಆಹುತಿ..! ಕೆಲಸ ಮುಗಿಸಿ ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಿದ್ದ ಡೆಲಿವರಿ ಬಾಯ್ ಗಳು..!

ಬುಡಕಟ್ಟು ಜನಾಂಗದ ಮುರ್ಮು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ

ವಿಕೃತ ಕಾಮಿ ಉಮೇಶ್ ರೆಡ್ಡಿಯಿಂದ ಪೆರೋಲ್ ಬಿಡುಗಡೆಗಾಗಿ ತಾಯಿ ಸೆಂಟಿಮೆಂಟ್ ಕಾರ್ಡ್ ಪ್ಲೇ..!, ಆತನ ಬೇಡಿಕೆಗೆ ಆಗಲ್ಲ ಎಂದ ಹೈಕೋರ್ಟ್..? ಏನಿದು ರೆಡ್ಡಿ ಕಾರ್ಡ್..?