ಕರಾವಳಿಸುಳ್ಯ

ಸುಳ್ಯದ ಅಜ್ಜಾವರದಲ್ಲಿ ಸೋಗೆ ರಹಸ್ಯ, ಪ್ರಕೃತಿ ವಿಸ್ಮಯ ಕಂಡು ಬೆರಗಾದ ಜನ..!

424

ನ್ಯೂಸ್ ನಾಟೌಟ್: ಪ್ರಕೃತಿ ತನ್ನೊಡಲೊಳಗೆ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟಿದೆ. ಮನುಷ್ಯ ಅರ್ಥ ಮಾಡಿಕೊಳ್ಳಲಾಗದ ಚಿತ್ರ ವಿಚಿತ್ರ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತದೆ. ಇದೀಗ ಸುಳ್ಯದ ಅಜ್ಜಾವರದಲ್ಲೂ ಇಂತಹುದ್ದೇ ಒಂದು ಪ್ರಕೃತಿ ವಿಸ್ಮಯ ನಡೆದಿದೆ. ಈ ಕೌತುಕದ ವಿಚಾರ ಕಂಡು ಹಲವಾರು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದೇ ಹಾಳೆಯಲ್ಲಿ ಎರಡು ಸೋಗೆ ಕಂಡು ಬಂದಿದ್ದು ಸುತ್ತಮುತ್ತಲಿನ ಜನ ಮೂಕ ವಿಸ್ಮಿತರಾಗಿದ್ದಾರೆ.


ಸಾಮಾನ್ಯವಾಗಿ ಅಡಿಕೆ ತೋಟ ಇದ್ದವರಿಗೆ ಸೋಗೆ ಸಂಗ್ರಹಿಸುವುದು ಕೂಡ ಕೆಲಸವಾಗಿರುತ್ತದೆ. ದಿನನಿತ್ಯ ಸೋಗೆಯನ್ನು ತಂದು ಅದನ್ನು ಕಟ್ ಮಾಡಿ ಕೆಲವರು ತೆಂಗಿನ ಗಿಡ ಅಥವಾ ಅಡಿಕೆಯ ಗಿಡದ ಬುಡಕ್ಕೆ ಕಡಿದು ಹಾಕುವುದು ಸಾಮಾನ್ಯ. ಇನ್ನೂ ಕೆಲವರು ಸೋಗೆಯಲ್ಲಿ ಬರುವ ಹಾಳೆಯನ್ನು ಊಟದ ತಟ್ಟೆಯಾಗಿ ಮಾಡಿ ಬದುಕಿನ ಉದ್ಯಮವಾಗಿ ಮಾಡಿಕೊಂಡಿರುತ್ತಾರೆ. ಸೋಗೆಯ ಹಾಳೆಯಿಂದ ಮುಟ್ಟಪ್ಪಾಳೆಯನ್ನು ಕೂಡ ಸಿದ್ಧ ಮಾಡಲಾಗುತ್ತದೆ. ಅಂತಹ ಸೋಗೆಯ ವಿಚಾರ ಈಗ ಅಜ್ಜಾವರದಲ್ಲಿ ಸದ್ದು ಮಾಡುತ್ತಿದೆ. ಒಂದೇ ಹಾಳೆಯಲ್ಲಿ ಎರಡು ಸೋಗೆ ಕಂಡು ಬಂದಿದೆ. ಅಜ್ಜಾವರ ಗ್ರಾಮದ ಸೂರ್ಯ ಮುಂಡೋಳಿಮೂಲೆ ಅವರ ಮನೆಯಲ್ಲಿ ಈ ಪ್ರಕೃತಿ ವಿಸ್ಮಯ ನಡೆದಿದೆ. ಎಂದಿನಂತೆ ಅವರು ಅಡಿಕೆ ಕೊಯ್ಯುಸುತ್ತಿದ್ದಾಗ ಒಂದೇ ಹಾಳೆಯಲ್ಲಿ ಎರಡು ಸೋಗೆ ಈ ವಿಚಿತ್ರವನ್ನು ಅಡಿಕೆ ತೆಗೆಯುವ ವ್ಯಕ್ತಿ ಗಮನಕ್ಕೆ ತಂದಿದ್ದಾರೆ. ತಕ್ಷಣ ಇದನ್ನು ಸೂರ್ಯ ಅವರು ನ್ಯೂಸ್ ನಾಟೌಟ್ ಮಾಧ್ಯಮದ ಗಮನಕ್ಕೆ ತಂದಿದ್ದಾರೆ.

See also  ಸುಳ್ಯ : ಪ್ಲಾಟಿಂಗ್ ಭೂದಾಖಲೆ, ಕನ್ವರ್ಶನ್‌ ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಹೋರಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget