ರಾಜ್ಯ

‘ಹೈ ಪ್ರೊಫೈಲ್’ ವ್ಯಕ್ತಿಗಳಿಗೆ ಈಗ ‘ಪೆನ್ ಡ್ರೈವ್’ ಭಯ..! ಹೊರಬರುವುದೇ ಪೆನ್ ಡ್ರೈವ್ ನಲ್ಲಿರುವ ಅಸಲಿ ವ್ಯಕ್ತಿಗಳ ಮುಖವಾಡ..?

41
Spread the love

ನ್ಯೂಸ್ ನಾಟೌಟ್: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣ ರಾಷ್ಟ್ರವ್ಯಾಪ್ತಿ ಸದ್ದು ಮಾಡುತ್ತಿದ್ದಂತೆ ಇದೀಗ ರಾಜ್ಯದ ಇತರೆಡೆಗಳಲ್ಲೂ ಇರುವ ‘ಹೈ ಪ್ರೊಫೈಲ್’ ವ್ಯಕ್ತಿಗಳಿಗೆ ‘ಪೆನ್ ಡ್ರೈವ್’ ನಡುಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಕೆಲಸ, ಹಣ, ಶಿಕ್ಷಣ, ಅಧಿಕಾರದ ಆಮಿಷ ತೋರಿಸಿ ಕೆಲವರು ಯುವತಿಯರನ್ನು ದುರ್ಬಳಕ್ಕೆ ಮಾಡಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳು ಸಮಾಜದ ಎದುರು ಮಾಮೂಲಿಗಳಂತೆ ಜೀವನ ನಡೆಸುತ್ತಿದ್ದಾರೆ. ಅಂತಹವರ ಪ್ರಕರಣಗಳು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಗಳ ಬೆನ್ನಲ್ಲೇ ಸದ್ದು ಮಾಡುತ್ತಿದೆ. ಕೆಲವಷ್ಟು ಪೆನ್ ಡ್ರೈವ್ ಪ್ರಕರಣಗಳು ನಡೆದಿದ್ದು ಅಂತಹ ಪ್ರಕರಣಗಳು ಕೂಡ ಮುಂದಿನ ದಿನಗಳಲ್ಲಿ ಹೊರಬಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ತನಿಖೆ ಬಿರುಸುಗೊಂಡಿದೆ. ಆದರೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ತನಿಖೆಗೆ ಸಹಕಾರ ನೀಡುತ್ತಿಲ್ಲ. ಈತನ ವಿರುದ್ಧ ಹಲವು ನೋಟಿಸ್ ಗಳನ್ನು ನೀಡಲಾಗಿದೆ. ಭಾರತಕ್ಕೆ ಕರೆತಂದು ವಿಚಾರಣೆ ನಡೆಸುವುದು ಯಾವಾಗ ಎನ್ನುವುದು ಇನ್ನೂ ಗೊಂದಲವಾಗಿಯೇ ಉಳಿದಿದೆ.

See also  ರಾಜ್ಯದಲ್ಲಿ ಇಲಿ ಜ್ವರಕ್ಕೆ ಮೊದಲ ಸಾವು..! ಡೆಂಗ್ಯೂ ನಡುವೆ ರಾಜ್ಯವನ್ನು ಕಾಡುತ್ತಿದೆ ಮತ್ತೊಂದು ಮಹಾಮಾರಿ..!
  Ad Widget   Ad Widget   Ad Widget