ಕೃಷಿ ಸಂಪತ್ತು

ನಾಳೆ ಸುಳ್ಯದಲ್ಲಿ ಮೂರು ದಿನಗಳ ಬೃಹತ್ ಕೃಷಿ ಮೇಳ 

416

ನ್ಯೂಸ್ ನಾಟೌಟ್ : ಪಯಸ್ವಿನಿ  ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳ ಸಹಯೋಗ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಡಿ 16,17 ಹಾಗೂ 18ರಂದು  ಸುಳ್ಯದ ಚೆನ್ನ ಕೇಶವ ದೇವಸ್ಥಾನದ ಮೈದಾನದಲ್ಲಿ ಮೂರು ದಿನಗಳ  ಕಾಲ ಬೃಹತ್ ಕೃಷಿ ಮೇಳ ನಡೆಯಲಿದೆ.

ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕ ಕಂಪನಿ , ಮಂಗಳೂರು ವಿಶ್ವ ವಿದ್ಯಾನಿಲಯ, ಸಾವಯುವ ಕೃಷಿಕ ಬಳಗ ಮಂಗಳೂರು ಹಾಗೂ ಸುಳ್ಯ ಸಹಕಾರಿ ಯೂನಿಯನ್ ಜಂಟಿ ಆಶ್ರಯದಲ್ಲಿ  ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಹೀಗಾಗಿ ಅಂತಹ ರೈತರನ್ನು ಸಾವಯುವ ಗೊಬ್ಬರದ ಕೆಡಗೆ ಪ್ರೇರೇಪಿಸುವುದು ಅತಿ ಮುಖ್ಯವಾಗಿದೆ. ಜನರಿಗೆ ಕೃಷಿಯ  ಪ್ರಾಮುಖ್ಯತೆ ವಿವರಿಸಲು ಇದೊಂದು ಉತ್ತಮ ಕೃಷಿ ಮೇಳವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಕೃಷಿಗೆ ಪ್ರೇರೇಪಿಸುವ ಅವಕಾಶವಾಗಿದೆ.

  • ಸಾವಯುವ ಮತ್ತು ಆಧುನಿಕ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ಕೊಡುವುದು.
  • ಕೃಷಿ ಉತ್ಪನ್ನ ಮತ್ತು ಉಪಕರಣ ಇತ್ಯಾದಿ ಮಳಿಗೆಗಳ ಪ್ರದರ್ಶನ , ಮಾರಾಟ, ಪ್ರಾತ್ಯಕ್ಷಿತೆಗಳ  ಮೂಲಕ ತಿಳುವಳಿಕೆ
  • ಕೃಷಿ ತೋಟಗಾರಿಕೆ, ಒಳನಾಡು ಮೀನುಗಾರಿಕೆ, ಪರ್ಯಾಯ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರಗಳು ಮತ್ತು ಸಗಕಾರದಿಂದ ಸಹಾಯ ಮತ್ತು ಸವಾಲುಗಳ ವಿವರಣೆ.
  • ಹೊಸ ಪೀಳಿಗೆಗೆ ಕೃಷಿ ಬಗ್ಗೆ ಒಲವು ಮೂಡಿಸಲು ಕಾರ್ಯಕ್ರಮಗಳು ಮತ್ತು ಶಾಲೆಗಳಲ್ಲಿ ಆದಾಗಲೇ ಸಣ್ಣ ಕೈತೋಟ ಮಾಡಿದ್ದನ್ನು ಗುರುತಿಸುವುದು ಹಾಗೂ ಮಕ್ಕಳಿಗೆ ಉತ್ತೇಜನ ನೀಡುವುದು.
  • ಪಾರಂಪರಿಕ ಗ್ರಾಮವನ್ನು ರಚಿಸಿ ಹಿರಿಯರು ಉಪಯೋಗಿಸುತ್ತಿದ್ದ ಉಪಕರಣಗಳು, ಜೀವನಶೈಲಿ, ಕುಲಕಸುಬುಗಳ ಬಗ್ಗೆ  ವಿವರಣೆ ಮತ್ತು ಲೈವ್ ಪ್ರದರ್ಶನ.
  • ಹಿಂದಿನ ಕಾಲದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ  ಹಾಗೂ ವಿವಿಧ ಮಳಿಗೆಗಳನ್ನು ಮಾಡಿ  ಗ್ರಾಮೀಣ ಮತ್ತು ನಗರದ ಜನರ ಕೃಷಿಗೆ ಆಕರ್ಷಣೆ ಮಾಡುವುದಾಗಿದೆ.
See also  ಬಜಗೋಳಿ : ವೈದ್ಯಕೀಯ ಪ್ರಕೋಷ್ಟ ವನಮಹೋತ್ಸವ ಕಾಯ೯ಕ್ರಮ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget