ಕ್ರೈಂವೈರಲ್ ನ್ಯೂಸ್ಸಿನಿಮಾ

ಅಮ್ಮನನ್ನು ಜೈಲಿಗೆ ಕರೆದೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡನ ಮಗಳು..! ಪೊಲೀಸ್ ವ್ಯಾನ್ ನಲ್ಲೇ ಕುಳಿತು ಸಮಾಧಾನ ಮಾಡಿದ ಪವಿತ್ರ ಗೌಡ

ನ್ಯೂಸ್ ನಾಟೌಟ್ : ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್‌ ಹಾಗೂ ಕೊಲೆ ಪ್ರಕರಣದಲ್ಲಿ ಇಂದು(ಜೂ.೨೦) ಜೈಲು ಪಾಲಾದ ತಾಯಿಯನ್ನು ಕಂಡು ಪವಿತ್ರಾ ಗೌಡನ ಮಗಳು ಕಣ್ಣೀರು ಹಾಕಿದ ಘಟನೆ ನಡೆಯಿತು. ಕೊಲೆ ಪ್ರಕರಣ ಸಂಬಂಧ ಇಂದು ಮಧ್ಯಾಹ್ನದ ಬಳಿಕ ಆರೋಪಿಗಳನ್ನು ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. (Darshan Thoogudeepa)

ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್‌, ದರ್ಶನ್‌ ಸಹಿತ 4 ಮಂದಿಯನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ. ಪವಿತ್ರಾ ಗೌಡ ಮತ್ತು ಇತರ 9 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ ಕೋರ್ಟ್‌ ಹೊರಗಡೆ ಪವಿತ್ರಾ ಗೌಡನ ತಾಯಿ ಮತ್ತು ಮಗಳು ಕಾಯುತ್ತಾ ನಿಂತಿದ್ದರು. ಪವಿತ್ರಾ ಗೌಡ ಕೋರ್ಟ್‌ನಿಂದ ಹೊರ ಬಂದು ಪೊಲೀಸ್‌ ವ್ಯಾನ್‌ ಹತ್ತುತ್ತಿದ್ದಂತೆಯೇ ಇಬ್ಬರು ಕೂಡ ಪವಿತ್ರಾ ಗೌಡನನ್ನು ಕಂಡು ಕಣ್ಣೀರು ಹಾಕಿದ್ದಾರೆ.

ಇನ್ನು ಪವಿತ್ರಾ ಗೌಡ ಕೂಡ ಇಬ್ಬರನ್ನು ನೋಡಿ ಗದ್ಗದಿತರಾದರು. ಕಣ್ಣೀರು ಹಾಕುತ್ತಿದ್ದ ಮಗಳಿಗೆ, “ಏನೂ ಆಗಲ್ಲ.. ಸುಮ್ಮನೇ ಇರು ಸುಮ್ಮನೆ ಇರು” ಎಂದು ಪವಿತ್ರಾ ಗೌಡ ಸಮಾಧಾನ ಮಾಡಿದ್ದಾರೆ. ಆದರೆ ಹೆಚ್ಚಿನ ಮಾತುಕತೆಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಕೂಡಲೇ ವ್ಯಾನ್‌ ಪರಪ್ಪನ ಅಗ್ರಹಾರ ಜೈಲಿನತ್ತ ತೆರಳಿದೆ.

Click 👇

https://newsnotout.com/2024/06/darshan-again-to-police-custody-and-remaining-10-are-jailed-parappana-agrahara
https://newsnotout.com/2024/06/real-hero-mahesh-babu-helps-poor-family-and-taken-for-granted
https://newsnotout.com/2024/06/polcie-subinspector-case-and-suspended-from-service-and-arrested
https://newsnotout.com/2024/06/ramayana-stage-play-fine-due-to-misleading-content-and-parts

Related posts

ಉಡುಪಿ ಹತ್ಯೆ ಪ್ರಕರಣ: ಸಿಎಂ ಸಿದ್ಧುವನ್ನು ಭೇಟಿ ಮಾಡಿದ್ದೇಕೆ ಮುಸ್ಲಿಂ ಒಕ್ಕೂಟ..? ಸಿದ್ಧರಾಮಯ್ಯ ಹೇಳಿದ್ದೇನು?

ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ನರ್ಸಿಂಗ್ ವಿದ್ಯಾರ್ಥಿ ಸಾವು

ಮಧ್ಯರಾತ್ರಿ ಮಾಜಿ ಪತಿಯ ಮನೆಗೆ ಬಂದದ್ದೇಕೆ ಮಲೈಕಾ..! ಏನಿದು ಘಟನೆ..?