ಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಪವಿತ್ರಾ ಗೌಡ ಮನೆಯಲ್ಲಿ ಶ್ವಾನಗಳನ್ನು ನೋಡಿಕೊಳ್ಳುತ್ತಿದ್ದವ ಜೈಲು ಪಾಲು..! ದುಬಾರಿ ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್..!

250

ನ್ಯೂಸ್‌ ನಾಟೌಟ್‌: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಮನೆಯಲ್ಲಿದ್ದ ದುಬಾರಿ ಬೆಲೆಯ ಶ್ವಾನಗಳನ್ನು ಅಧಿಕಾರಿಗಳು ದರ್ಶನ್ (Darshan) ಮನೆಗೆ ಶಿಫ್ಟ್ ಮಾಡಿದ್ದಾರೆ.

ಪವಿತ್ರ ಗೌಡ ಮನೆಯಲ್ಲಿದ್ದ ಬುಲ್ ಡಾಗ್ (Bulldog) ಹಾಗೂ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ. ಪವಿತ್ರಾ ಮನೆಯಲ್ಲಿ ಪವನ್ ಈ ಶ್ವಾನಗಳನ್ನ ನೋಡಿಕೊಳ್ಳುತ್ತಿದ್ದ. ಆತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇದರಿಂದ ಮನೆಯಲ್ಲಿ ಶ್ವಾನವನ್ನ ನೋಡಿಕೊಳ್ಳಲು ಯಾರು ಇಲ್ಲದ ಕಾರಣ ನಾಯಿಗಳು ಸೊರಗಿ ಹೋಗಿದ್ದವು. ಇದೇ ಕಾರಣಕ್ಕೆ ಶ್ವಾನಗಳನ್ನ ಅಧಿಕಾರಿಗಳು ದರ್ಶನ್ ಮನೆಗೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.

ಶ್ವಾನಗಳು ಸೊರಗಿ ಹೋಗುತ್ತಿರುವ ವಿಚಾರ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಹರೀಶ್ ಹಾಗೂ ಲೀನಾ ಅವರು ಆರ್.ಆರ್ ನಗರ ಪೆÇಲೀಸ್ ಠಾಣೆ ಮತ್ತು ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತಂದಿದ್ದರು. ಇದೀಗ ಅಧಿಕಾರಿಗಳ ನೆರವಿನಿಂದ ಪವಿತ್ರಾಗೌಡ ಮನೆಯಲ್ಲಿದ್ದ ಎರಡು ಶ್ವಾನಗಳನ್ನ ದರ್ಶನ್ ಮನೆಗೆ ಶಿಫ್ಟ್ ಮಾಡಿದ್ದಾರೆ. ಉಳಿದ ಮತ್ತೊಂದು ಶ್ವಾನವನ್ನ ಪವಿತ್ರಾ ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

See also  ಸಂಪ್ಯದಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಲಾರಿ ರಿಕ್ಷಾಕ್ಕೆ ಡಿಕ್ಕಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget