ನ್ಯೂಸ್ ನಾಟೌಟ್: ಹೆಗಲೆತ್ತರಕ್ಕೆ ಬೆಳೆದ ಮಕ್ಕಳಿರುವ ಹೊರತಾಗಿಯೂ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಮಕ್ಕಳು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ನಾವಿನ್ನೂ ಮಕ್ಕಳು ಮಾಡಿಕೊಳ್ಳುವಷ್ಟು ಸಮರ್ಥರಿದ್ದೇವೆ ಎಂದು ನರೇಶ್ ಮಾತನಾಡಿದ್ದಾರೆ.
ಸದ್ಯ ಪವಿತ್ರಾ-ನರೇಶ್ ಜೋಡಿ ‘ಮಳ್ಳಿ ಪೆಳ್ಳಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಇವರಿಬ್ಬರ ಜೀವನ ಕಥೆಯನ್ನೇ ತೆರೆದಿಡಲಾಗಿದೆ. ಈ ಸಿನಿಮಾ ತೆರೆಕಂಡಿದೆ. ಆಂಧ್ರ, ತೆಲಂಗಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಹದಿನೈದು ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಈ ಬಗ್ಗೆ ಮಾತನಾಡುವ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಲೋಕೇಶ್, ‘ಸಾಕಷ್ಟು ಮಕ್ಕಳಿಗೆ ಪ್ರಪಂಚದಲ್ಲಿ ತಂದೆ-ತಾಯಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮಕ್ಕಳನ್ನು ಪಡೆಯುವ ಅವಶ್ಯಕತೆ ಏನಿದೆ? ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ನರೇಶ್, ನಮಗೆ ಈಗಾಗಲೇ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಮಗು ಪಡೆಯುವುದಕ್ಕೆ ನಾವು ದೈಹಿಕವಾಗಿ ಅರ್ಹರಿದ್ದೇವೆ’ ಎಂದು ತಿಳಿಸಿದ್ದಾರೆ.