ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್ಸಿನಿಮಾ

Pavithra jayaram: ಖ್ಯಾತ ಕಿರುತೆರೆ ನಟಿ ಇನ್ನಿಲ್ಲ..! ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ..!

189

ನ್ಯೂಸ್ ನಾಟೌಟ್: ಕಿರುತೆರೆ ನಟಿ ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಟಿ ಕೊನೆಯುಸಿರೆಳೆದ ಘಟನೆ ಇಂದು(ಮೇ.೧೨) ನಡೆದಿದೆ. ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತಕ್ಕೀಡಾಗಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇವರು ಕನ್ನಡದ ಸೀರಿಯಲ್​ಗಳಲ್ಲಿ ಮನೆ ಮಾತಾಗಿದ್ದರು. ಕನ್ನಡದ ಹಲವು ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಇವರು ತಮ್ಮದೇ ಆದ ಯುಟ್ಯೂಬ್ ಚಾನೆಲ್ ತೆರೆದು ಆ ಮೂಲಕವೂ ಹೆಚ್ಚಿನ ಜನರನ್ನು ತಲುಪಿದ್ದರು. ನಾನು ಹೆಚ್ಚಿನ ಶಿಕ್ಷಣ ಪಡೆದಿರಲಿಲ್ಲ. ಕನ್ನಡದ ರೋಬೋ ಫ್ಯಾಮಿಲಿ ಮೂಲಜ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಂತರ ಅವರು ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ನಂತರ ಅವರು ಗ್ರಂಥಾಲಯದಲ್ಲಿ ಹಾಗೂ ಸೇಲ್ಸ್​ ಗರ್ಲ್​ ಆಗಿ ಕೂಡ ಕೆಲಸ ಮಾಡಿದ್ದರಂತೆ. ಜೀವನದಲ್ಲಿ ಹಂತ ಹಂತವಾಗಿ ಮುಂಬರುತ್ತಿರುವವರು ಇವರಾಗಿದ್ದರು. ಇತ್ತೀಚೆಗೆ ತೆಲುಗಿನ ತ್ರಿನಯನಿ ಮೂಲಕ ತೆಲುಗರ ಮನೆಮಾತಾಗಿದ್ದ ಪವಿತ್ರ (Pavithra jayaram) ಈ ಹಿಂದೆ ಹಲವು ಕನ್ನಡ ದಾರವಾಹಿಗಳಲ್ಲೂ ನಟಿಸಿದ್ದಾರೆ.

Click 👇

https://newsnotout.com/2024/05/mother-and-baby-in-forest-kannada-news
https://newsnotout.com/2024/05/uppinangady-theft-police

See also  ಗರ್ಭಗುಡಿ ಪ್ರವೇಶಿಸಿದ ಮಹಿಳೆಯನ್ನು ಎಳೆದು ಹೊರ ಹಾಕಿದ್ದೇಕೆ ಸಿಬ್ಬಂದಿ..! ರಾಜವಂಶಸ್ಥೆಯನ್ನು ಬಂಧಿಸಿದ್ದೇಕೆ ಪೊಲೀಸರು? ಅಷ್ಟಕ್ಕೂ ಮಧ್ಯರಾತ್ರಿ ನಡೆದದ್ದಾದರೂ ಏನು? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget