ಕ್ರೈಂವೈರಲ್ ನ್ಯೂಸ್ಸಿನಿಮಾ

ಹಲವು ದಿನಗಳ ಬಳಿಕ ಜಾಮೀನಿಗಾಗಿ ಕೋರ್ಟ್‌ ಮೊರೆ ಹೋದ ಪವಿತ್ರಾ ಗೌಡ..! ಆಗಸ್ಟ್ 22ಕ್ಕೆ ಭವಿಷ್ಯ ನಿರ್ಧಾರ..!

224

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan Thoogudeepa) 2ನೇ ಆರೋಪಿ, ಆತನ ಗೆಳತಿ ಪವಿತ್ರಾ ಗೌಡ 1ನೇ ಆರೋಪಿಯಾಗಿದ್ದಾರೆ.

ಸೋಮವಾರ ನಟಿ ಪವಿತ್ರಾ ಗೌಡ ಪರ ವಕೀಲರು ಬೆಂಗಳೂರಿನ ಸಿಹೆಚ್‌ 57ನೇ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಅನು ಕುಮಾರ್ ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಸ್ಟ್ 14ರಂದು ಕೋರ್ಟ್ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರ ತನಕ ವಿಸ್ತರಣೆ ಮಾಡಿದೆ. ಜೂನ್ 11 ರ ಮಂಗಳವಾರ ಪವಿತ್ರಾ ಗೌಡರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು.

ನಟಿ ಪವಿತ್ರಾ ಗೌಡ ಜಾಮೀನಿಗಾಗಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಿಕೆ ಮಾಡಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಆಕ್ಷೇಪಣೆಯನ್ನು ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ ಎನ್ನಲಾಗಿದೆ.

Click

https://newsnotout.com/2024/08/viral-video-village-west-bengal-elephant-kannada-news/
https://newsnotout.com/2024/08/indira-gandhi-mamatha-banarji-kannada-news-protest-insta-video/
https://newsnotout.com/2024/08/mangaluru-mooda-case-cm-siddaramayya-issue-bus-damage/
https://newsnotout.com/2024/08/press-meet-heart-attack-kannada-news-viral-news-kuruba/
https://newsnotout.com/2024/08/benngaluru-issue-dance-choreographer-arrest-kannada-news/
See also  ಆತನ ಉಪದ್ರ ತಡೆಯಲಾರದೆ ಸಿಎಂ ಯೋಗಿ ಆದಿತ್ಯನಾಥ್ ಗೆ ರಕ್ತದಲ್ಲೇ ಪತ್ರ ಬರೆದ ವಿದ್ಯಾರ್ಥಿನಿಯರು..! ಪ್ರಾಂಶುಪಾಲ ಆಡಿದ್ದ ಆ ಪೋಲಿಯಾಟವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget