ಕ್ರೈಂ

ಪಾವಂಜೆ: ಭೀಕರ ರಸ್ತೆ ಅಪಘಾತ, 2 ಸಾವು, 1 ಗಾಯ

494

ಪಾವಂಜೆ: ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಾವಂಜೆಯ ಸಮೀಪ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾತ್ರಿ ನಡೆದಿದೆ. ಮಾರುತಿ ಓಮ್ನಿ ಕಾರು ಮತ್ತು ಎಕ್ಸ್​​ಪ್ರೆಸ್ ಬಸ್ಸಿನ ನಡುವೆ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಕ್ಕಪಡ್ರೆ ನಿವಾಸಿಗಳಾದ ಭುಜಂಗ ಹಾಗೂ ವಸಂತ್ ಸಾವನ್ನಪ್ಪಿದವರು. ಕಾರು ಚಾಲಕ ಬಾಲಕೃಷ್ಣ ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳೆಯಂಗಡಿ ಒಳ ರಸ್ತೆಯಿಂದ ಪಾವಂಜೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವಾಗ ಓಮ್ನಿ ಮಂಗಳೂರಿನಿಂದ ಬರುತ್ತಿದ್ದ ಎಕ್ಸ್​ಪ್ರೆಸ್ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕೊಡಗು:5 ವರ್ಷದ ಹಿಂದೆ ಸತ್ತು ಸಂಸ್ಕಾರವಾಗಿದ್ದ ಹೆಂಡ್ತಿ ಎ.1ರಂದು ಪ್ರತ್ಯಕ್ಷ..!ಕೊಲೆ ಕೇಸ್‌ ಎಂದು 2 ವರ್ಷ ಜೈಲು ವಾಸ ಅನುಭವಿಸಿದ್ದ ಗಂಡ..!ಏನಿದು ರೋಚಕ ಸ್ಟೋರಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget