ಕರಾವಳಿಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಪಟ್ಟಣಗೆರೆ ಶೆಡ್​ ನಲ್ಲಿ ಕೊಲೆಗೂ ಮುನ್ನ ತೆಗೆದ ಫೋಟೋಗಳು ವೈರಲ್..! ಶೆಡ್ ​ನಲ್ಲಿ ಕೈ ಮುಗಿದು ಅಂಗಲಾಚುತ್ತಿರುವ ರೇಣುಕಾಸ್ವಾಮಿ..!

245

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಸೇರಿ ಅನೇಕರ ವಿರುದ್ಧ ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ. ಈ ಮಧ್ಯೆ ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಪಟ್ಟಣಗೆರೆ ಶೆಡ್​ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಶೆಡ್ ಗೆ ಕರೆದೊಯ್ಯುವ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿಗೆ ಸಾಕಷ್ಟು ಚಿತ್ರಹಿಂಸೆ ನೀಡಲಾಗಿತ್ತು. ಈ ಟಾರ್ಚರ್​ನಿಂದಲೇ ಅವರು ಮೃತಪಟ್ಟಿದ್ದರು. ಈಗ ಶೆಡ್ ನಲ್ಲಿ ಲಾರಿಗಳ ನಡುವೆ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಅದಕ್ಕೆ ಸಾಕ್ಷಿ ಎಂಬಂತೆ ವೈರಲ್ ಆಗುತ್ತಿದೆ.

ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋ ಮಾತ್ರವಲ್ಲದೆ ಅವರು ಶವವಾಗಿ ಬಿದ್ದ ಫೋಟೋಗಳೂ ಸಿಕ್ಕಿವೆ. ಆರೋಪಿಗಳ ಮೊಬೈಲ್​ನಲ್ಲಿ ಇದನ್ನು ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ಈ ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ. ಚಾರ್ಜ್​ಶೀಟ್​​ನಲ್ಲಿ ಈ ಫೋಟೋಗಳನ್ನು ಲಗತ್ತಿಸಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಲ್ಲಿ ಒಂದು ಎನ್ನಲಾಗಿದೆ.

See also  ಆರ್.ಎಸ್.ಎಸ್ ವಿರೋಧಿಸುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಗೆ ಆರ್.ಎಸ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ! ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದರೂ ನಾನು ಹೋಗೋದಿಲ್ಲ ಎಂದದ್ದೇಕೆ ನಿರ್ದೇಶಕ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget