Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಆ್ಯಪಲ್, ಫೇಸ್‌ಬುಕ್, ಗೂಗಲ್ ನ 16 ಶತಕೋಟಿ ಪಾಸ್‌ ವರ್ಡ್ ಗಳ ಸೋರಿಕೆ..! ಸಂದೇಶಗಳಲ್ಲಿ ಬಂದ ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಫೇಸ್ ಬುಕ್ ವಾರ್ನಿಂಗ್..!

2.4k

ನ್ಯೂಸ್ ನಾಟೌಟ್: ಆ್ಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ. ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184 ದಶಲಕ್ಷ ಪಾಸ್ ವರ್ಡ್ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಮೇ 23ರಂದು ವರದಿ ಪ್ರಟಕವಾಗಿತ್ತು. ಈ ಬಗ್ಗೆ ಸಂಶೋಧನೆ ಮುಂದುವರಿಸಿದಾಗ ಬಹುದೊಡ್ಡ ಪ್ರಮಾಣದ ಮಾಹಿತಿ ಸೋರಿಕೆ ದೃಢಪಟ್ಟಿದೆ.

ತಂತ್ರಜ್ಞಾನ ಕೇಂದ್ರಿತ ಜಗತ್ತಿನಲ್ಲಿ ಪಾಸ್‌ ವರ್ಡ್‌ ಸೋರಿಕೆಯು ನಮ್ಮ ಇಡೀ ಖಾತೆಯ ಮಾಹಿತಿಗಳ ಸೋರಿಕೆಗೆ ಕಾರಣವಾಗುತ್ತದೆ. ಆದ್ದರಿಂದಲೇ ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಪಾಸ್‌ ವರ್ಡ್ ಗಳನ್ನಾಗಿ ಬದಲಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅಂತೆಯೇ ಎಸ್ ಎಂ ಎಸ್ ಸಂದೇಶಗಳಲ್ಲಿ ಬಂದ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಫೇಸ್‌ ಬುಕ್ ಎಚ್ಚರಿಕೆ ನೀಡಿದೆ. ಹೀಗೆ ಕಳ್ಳತನವಾದ ಪಾಸ್‌ವರ್ಡ್‌ಗಳು ಡಾರ್ಕ್‌ವೆಬ್‌ ಗಳಲ್ಲಿ ಅಗ್ಗದ ದರಕ್ಕೆ ಮಾರಾಟಕ್ಕೆ ಲಭ್ಯವಿರುವುದು ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸುಮಾರು ಲಕ್ಷಾಂತರ ಪಾಸ್‌ ವರ್ಡ್‌ ಗಳಿಂದ ಹಿಡಿದು 3.5 ಶತಕೋಟಿ ಪಾಸ್‌ವರ್ಡ್‌ಗಳವರೆಗೆ ಹೊಂದಿರುವ 30 ಮಾಹಿತಿ ಸೆಟ್ ಗಳು ಪತ್ತೆಯಾಗಿವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿರುವ ವಿಲಿಯುಸ್ ಪೆಟ್ಕಾಸ್ಕಸ್ ಸಂಸ್ಥೆ ಹೇಳಿದೆ. ಒಟ್ಟು ಸುಮಾರು 16 ಶತಕೋಟಿಗಿಂತ ಹೆಚ್ಚು ಪಾಸ್‌ವರ್ಡ್‌ಗಳು ಸೋರಿಕೆಯಾಗಿವೆ ಎನ್ನುವುದು ಸಂಸ್ಥೆಯ ಹೇಳಿಕೆ. ಇದರಲ್ಲಿ ಎಲ್ಲ ಪ್ರಮುಖ ಟೆಕ್ ಸಂಸ್ಥೆಗಳ ಸಾಮಾಜಿಕ ಜಾಲತಾಣ, ವಿಪಿಎನ್, ಡೆವಲಪರ್ ಪೋರ್ಟೆಲ್ ಗಳ ಪಾಸ್‌ವರ್ಡ್‌ಗಳು ಸೇರಿವೆ. ಆ್ಯಪಲ್, ಫೇಸ್‌ಬುಕ್, ಗೂಗಲ್, ಗಿಟ್‌ಹಬ್, ಟೆಲಿಗ್ರಾಂ ಮತ್ತು ವಿವಿಧ ಸರ್ಕಾರಿ ಸೇವೆಗಳ ಪಾಸ್‌ವರ್ಡ್‌ಗಳು ಸೋರಿಕೆ ಪಟ್ಟಿಯಲ್ಲಿವೆ.

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​ ಬೆನ್ನಲ್ಲೇ ಸರ್ಕಾರದಿಂದ ಹೊಸ ನಿಯಮ ಜಾರಿ..! ಕಾರ್ಯಕ್ರಮ ಆಯೋಜಕರು ಕಾನೂನು ಮೀರಿದ್ರೆ 3 ವರ್ಷ ಜೈಲು..!

See also  1989 ರಲ್ಲಿ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದಿದ್ದ ವ್ಯಕ್ತಿ 20 ವರ್ಷಗಳ ಬಳಿಕ ಅರೆಸ್ಟ್..! ಈ ನಡುವೆ ಬೇರೊಂದು ಮದುವೆಯಾಗಿದ್ದ ಆಸಾಮಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget