Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಗಿಡುಗನಿಗೂ ಪಾಸ್‌ ಪೋರ್ಟ್‌ ಮಾಡಿಸಿದ ವ್ಯಕ್ತಿ..! ಇಲ್ಲಿದೆ ವೈರಲ್‌ ವಿಡಿಯೋ

310

ನ್ಯೂಸ್ ನಾಟೌಟ್: ಅರಬ್‌ ರಾಷ್ಟ್ರವಾದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ (UAE) ಸ್ಥಳೀಯ ಶ್ರೀಮಂತ ನಿವಾಸಿಗಳು ತಮ್ಮ ಐಷಾರಾಮಿ ಜೀವನಶೈಲಿ ಮತ್ತು ತರಹೇವಾರಿ ಪ್ರಾಣಿಗಳನ್ನು ಸಾಕುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಮಾಲೀಕರಂತೆ ಈ ಸಾಕು ಪ್ರಾಣಿಗಳು ಕೂಡಾ ಐಷಾರಾಮಿ ಜೀವನವನ್ನು ಆನಂದಿಸುತ್ತವೆ.

ಯುಎಇ ವ್ಯಕ್ತಿಯೊಬ್ಬ ತನ್ನ ಸಾಕು ಗಿಡುಗನಿಗೂ ಕೂಡಾ ಪಾಸ್‌ ಪೋರ್ಟ್‌ ಮಾಡಿಸಿ, ಅದರೊಂದಿಗೆ ಮೊರಾಕೊ ದೇಶಕ್ಕೆ ಟ್ರಿಪ್‌ ಹೊರಟಿದ್ದಾನೆ. ಅಬುಧಾಬಿಯ ಏರ್‌ ಪೋರ್ಟ್‌ನಲ್ಲಿ ಯುಎಇ ನ ಸ್ಥಳೀಯ ನಿವಾಸಿಯೊಬ್ಬ ಗಿಡುಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಂಡ ವಿದೇಶಿ ಪ್ರವಾಸಿಗನೊಬ್ಬ ಆತನ ಬಳಿ ಹೋಗಿ ಈ ಗಿಡುಗವೂ ನಿಮ್ಮೊಂದಿಗೆ ವಿಮಾನದಲ್ಲಿ ಬರುತ್ತಿದೆಯೇ? ಇದಕ್ಕೂ ಪಾಸ್‌ಪೋರ್ಟ್‌ ಇದೆಯೇ? ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಆ ವ್ಯಕ್ತಿ ಹೌದು ಗಿಡುಗನಿಗೂ ಪಾಸ್‌ಪೋರ್ಟ್‌ ಇದೆ. ನಾನು ಅದರೊಂದಿಗೆ ಮೊರಾಕೊ ದೇಶಕ್ಕೆ ಟ್ರಿಪ್‌ ಹೊರಟಿದ್ದೇನೆ ಎಂದು ಹೇಳಿ ವಿದೇಶಿಗನಿಗೆ ಹಕ್ಕಿಯ ಪಾಸ್‌ ಪೋರ್ಟ್‌ ತೋರಿಸಿದ್ದಾನೆ. ಈ ಕುರಿತ ವಿಡಿಯೋವನ್ನು uaefalcons_ ಹೆಸರಿನ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

 

View this post on Instagram

 

A post shared by عمار بن حميد (@uaefalcons_)

ಐದು ದಿನಗಳ ಹಿಂದೆ ಶೇರ್‌ ಮಾಡಲಾದ ಈ ವಿಡಿಯೋ 1.8 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಗಿಡುಗ ನಮಗಿಂತ ಉತ್ತಮ ಜೀವನವನ್ನು ನಡೆಸುತ್ತಿದೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

See also  ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಾಯಿ ಸಾವು..! ಇಲ್ಲಿದೆ ಮನಕಲಕುವ ವಿಡಿಯೋ
  Ad Widget   Ad Widget     Ad Widget   Ad Widget   Ad Widget   Ad Widget