ಕರಾವಳಿ

ಕಡಬ: ಚಲಿಸುತ್ತಿದ್ದ ಕೆಎಸ್​ಆರ್​​ಟಿಸಿ ಬಸ್​ನಿಂದ ಬಿದ್ದು ವ್ಯಕ್ತಿ ದುರಂತ ಅಂತ್ಯ,ಮತ್ತೋರ್ವ ವ್ಯಕ್ತಿಗೆ ಗಾಯ

217

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನಿಂದ (KSRTC Bus) ಬಿದ್ದು ದಾರುಣ ಅಂತ್ಯ ಕಂಡ ಘಟನೆ ದಕ್ಷಿಣ ಕನ್ನಡ  (Dakshina Kannada) ಜಿಲ್ಲೆಯ ಕಡಬ ಪಟ್ಟಣದ ಅಂಚೆ ಕಚೇರಿ ಬಳಿ ನಡೆದಿದೆ. ಕಡಬ ತಾಲೂಕಿನ ಗ್ರಾಮದ ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಚುತ್ತ ಗೌಡ (63) ಈ ದುರಂತದಲ್ಲಿ ಸಾವನ್ನಪ್ಪಿದ ವ್ಯಕ್ತಿ.

ಅಚ್ಚುತ ಗೌಡರು ಕಡಬದಿಂದ ಉಪ್ಪಿನಂಗಡಿ ಕಡೆಗೆ ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ತೆರಳಿದ್ದರು.ಈ ವೇಳೆ ಮನೆಗೆ ಹೊರಟಿದ್ದ ವೇಳೆ ಅಂಚೆ ಕಚೇರಿಯ ಸಮೀಪದ ತಿರುವಿನಲ್ಲಿ ಅಚ್ಚುತ್ತ ಗೌಡ ಹಾಗೂ ಬಲ್ಯ ನಿವಾಸಿ ಚಂದ್ರಶೇಖರ ಎಂಬವರು ಆಯತಪ್ಪಿ ಬಸ್ಸಿನಿಂದ ರಸ್ತೆಗೆ ಬಿದ್ದಿದ್ದಾರೆ.ಈ ಪೈಕಿ ಅಚ್ಚುತ್ತ ಗೌಡರು ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಬಸ್​ನಿಂದ ಬಿದ್ದು ಗಂಭೀರ ಗಾಯಗೊಂಡ ಅಚ್ಚುತ್ತ ಗೌಡರನ್ನು ಮೊದಲಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಆದ್ರೆ, ದುರದೃಷ್ಟವಶಾಥ್ ರಸ್ತೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಬಸ್‌ನಿಂದ ಕುಸಿದು ಬಿದ್ದ ಚಂದ್ರಶೇಖರ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕಡಬ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 337 ಮತ್ತು 304(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ನಂತೂರಿನಲ್ಲಿ ಜಂಕ್ಷನ್ ಬಳಿ ಪ್ರೈವೇಟ್ ಬಸ್ ಕಂಡಕ್ಟರ್ ಒಬ್ಬರು ಚಲಿಸುತ್ತಿದ್ದ ಬಸ್ ನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು.ಬಾಗಲಕೋಟೆ ನಿವಾಸಿ 23 ವರ್ಷದ ಈರಯ್ಯ(ಗುರು) ಎನ್ನುವರು ಚಲಿಸುತ್ತಿದ್ದ ಬಸ್​ನಿಂದ ಬಿದ್ದು ದಾರುಣ ಅಂತ್ಯವಾಗಿದ್ದರು. ಬಸ್ ನ ಮುಂಭಾಗದ ಬಾಗಿಲಿನ ಫುಟ್ ಬೋರ್ಡ್ ನಲ್ಲಿ ನಿಂತಿದ್ದ ಈರಯ್ಯ ಬಸ್ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು.ಆ ಬಳಿಕ ಮಂಗಳೂರಿನಲ್ಲಿ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು.ಆದರೆ ಇಂತಹ ದುರ್ಘಟನೆ ಮತ್ತೆ ಮತ್ತೆ ಮರುಕಲಿಸುತ್ತಿರುವುದು ವಿಪರ್ಯಾಸವೇ ಸರಿ.

See also  ಪುತ್ತೂರು:ನವವಿವಾಹಿತ ಹೃದಯಾಘಾತಕ್ಕೆ ಬಲಿ,ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget