ನ್ಯೂಸ್ ನಾಟೌಟ್: ಪಾರ್ಕ್ ಮಾಡಿದ್ದ ಕಾರಿನಲ್ಲಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
A man in his mid-30s was reportedly found dead in a car parked near Amudham Cafe in Brookfield, Bengaluru, on the night of the 20th. According to initial reports, the deceased is believed to have suffered a sudden heart attack while inside the vehicle.Upon receiving information… pic.twitter.com/WvxEDe1Hgj
— Karnataka Portfolio (@karnatakaportf) February 22, 2025
ಫೆ.20ರಂದು ಈ ಅವಘಡ ಸಂಭವಿಸಿದ್ದು, ತನ್ನ ಗ್ರ‍್ಯಾಂಡ್ ಐಟೆನ್ ಕಾರಿನಲ್ಲಿ ಮೃತಪಟ್ಟಿದ್ದು, ಮೃತದೇಹ ನೋಡಿದ ಅಪರಿಚಿತ ವ್ಯಕ್ತಿ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.