ಕರಾವಳಿ

ಇನ್ನೂ ಆರದ ಪರಶುರಾಮನ ಕಂಚಿನ ಪ್ರತಿಮೆಯ ಜ್ವಾಲಾಗ್ನಿ..! ಅನುದಾನ ತಡೆದು ಇಡೀ ಯೋಜನೆಯನ್ನೇ ಹಳ್ಳ ಹಿಡಿಸುತ್ತಿರುವುದರ ಹಿಂದಿನ ಉದ್ದೇಶವೇನು..?

237

ನ್ಯೂಸ್ ನಾಟೌಟ್: ತುಳುನಾಡಿನ ಪೌರಾಣಿಕ ಶಕ್ತಿ ಪರಶುರಾಮನ ಕಂಚಿನ ಪ್ರತಿಮೆಯ ವಿವಾದದ ಜ್ವಾಲಾಗ್ನಿ ಈಗಲೂ ಹೊತ್ತಿ ಉರಿಯುತ್ತಿದೆ. ಕಾರ್ಕಳದ ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತಿ ಪಡೆದಿರುವ ಜನನಾಯಕ ಶಾಸಕ ಸುನಿಲ್ ಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

10 ಕೋಟಿ ರೂ. ತಡೆ ಹಿಡಿದು ಅನ್ಯಾಯ..!

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆಂದು ಒಟ್ಟು 14 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿತ್ತು. ಈ ಹಣದ ಪೈಕಿ ಕೇವಲ ನಾಲ್ಕು ಕೋಟಿಯಷ್ಟೇ ಹಣ ಮಂಜೂರಾಗಿದೆ. ಉಳಿದ 10 ಕೋಟಿ ರೂ. ಅನುದಾನದ ಹಣವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ತಡೆ ಹಿಡಿಯುವ ಕೆಲಸ ಮಾಡಿದೆ. ಇದರಿಂದ ಕಾಂಗ್ರೆಸ್ ದ್ವೇಷದ ರಾಜಕೀಯಕ್ಕೆ ಕೈ ಹಾಕಿದೆ. ಅನುದಾನ ಬಿಡುಗಡ ಮಾಡದೆ ಪ್ರವಾಸಿ ಕಲ್ಪನೆ ಹೊತ್ತು ಯೋಜನೆ ರೂಪಿಸಿದ್ದನ್ನು ಕಾಂಗ್ರೆಸ್ ನೆಲಕ್ಕಚ್ಚುವಂತೆ ಮಾಡಿದೆ ಎಂದು ಕಾರ್ಕಳದ ಜನ ಈಗ ಮಾತನಾಡಿಕೊಳ್ಳುತ್ತಿದ್ದಾರೆ.

ಸುನಿಲ್ ಕುಮಾರ್ ಇತ್ತೀಚಿಗೆ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ. ಇಷ್ಟು ಹೇಳಿದ್ದರೂ ತನಿಖೆ ಮಾಡದೆ ಇಡೀ ಪ್ರವಾಸಿ ಯೋಜನೆಯನ್ನೇ ತಡೆ ಹಿಡಿದಿರುವುದು ಏಕೆ..? ಅನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡ ತೊಡಗಿದೆ. ಇದೆಲ್ಲದರ ನಡುವೆ ಥೀಂ ಪಾರ್ಕ್ ನಿರ್ಮಿಸುವ ಕಾರ್ಕಳದ ಅತ್ಯಂತ ದೊಡ್ಡ ಕನಸಿನ ಯೋಜನೆಯನ್ನು ಇನ್ನೆಷ್ಟು ದಿನ ತಡೆ ಹಿಡಿಯುತ್ತೀರಿ..? ಅನ್ನುವ ಪ್ರಶ್ನೆಯನ್ನು ಕಾರ್ಕಳದ ಜನ ಕೇಳುತ್ತಿದ್ದಾರೆ. ಈ ಕೂಡಲೇ ಥೀಂ ಪಾರ್ಕ್ ನಿರ್ಮಾಣಕ್ಕೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಿ ಅನ್ನುವ ಒತ್ತಾಯ ಕೇಳಿ ಬರುತ್ತಿದೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಮೌನ ವಹಿಸಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

See also  1 ವಾರದ ಹಿಂದೆ ನಾಗರಹಾವಿಗೆ ಡಿಸೇಲ್ ಎರಚಿದಾತನಿಗೆ ಅನಾರೋಗ್ಯ,ಹಾವಿನಂತೆ ಮೈಉರಿಯಿಂದ ಬಳಲಿದ ವ್ಯಕ್ತಿಗೆ ಚಿಕಿತ್ಸೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget