ಕ್ರೈಂಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್ಸಿನಿಮಾ

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿ.ಐ.ಪಿ ಗಳದ್ದೇ ಹವಾ..! ಮಾಧ್ಯಮಗಳ ಕಣ್ತಪ್ಪಿಸಿ ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ..!

176

ನ್ಯೂಸ್‌ ನಾಟೌಟ್‌: ಅತ್ಯಾಚಾರ ಪ್ರಕರಣದಲ್ಲಿ ಎಸ್​​ಐಟಿ ತನಿಖೆಯಲ್ಲಿ ಸತ್ಯ ಬಯಲಾಗಿ ಕೋರ್ಟ್ ಆದೇಶದ ಪ್ರಕಾರ ಪರಪ್ಪನ ಅಗ್ರಹಾರ ಸೇರಿರುವ ಪ್ರಜ್ವಲ್​ ರೇವಣ್ಣಗೆ (Prajwal Revanna) ಕೋರ್ಟ್​​ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಪೊಲೀಸರು, ಪ್ರಜ್ವಲ್​ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇನ್ನು ಸಲಿಂಗ ಕಾಮ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣ (Suraj Revanna) ಕೂಡ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೊತೆಗೆ ಈಗ ಭಾರೀ ಸುದ್ದಿಯಲ್ಲಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೂಡ ಇದೇ ಜೈಲಿನಲ್ಲಿ ವಿಚಾರಾಣಾಧೀನ ಕೈದಿಗಳಾಗಿ ದಿನ ಕಳೆಯುತ್ತಿದ್ದಾರೆ.

ಇಂದು ನಟ ದರ್ಶನ್ ನನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಬಂದಿದ್ದರು, ಜೊತೆಗೆ ವಿನೋದ್ ಪ್ರಭಾಕರ್ ಭೇಟಿಯಾಗಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಲು ಕುಟುಂಬ ಸದಸ್ಯರಿಗೆ ಅವಕಾಶ ನೀಡಲಾಗಿದೆ.

ಪರಪ್ಪನ ಅಗ್ರಹಾರದ ಬ್ಯಾರಿಕೇಡ್‌ವರೆಗೂ ಆಗಮಿಸಿದ್ದ ವಿಜಯಲಕ್ಷ್ಮಿ ಅವರ ಕಾರು ದಿಢೀರನೇ ವಾಪಸ್ ತೆರಳಿತ್ತು. ಪರಪ್ಪನ ಅಗ್ರಹಾರದ ಬಳಿ ವಿಜಯಲಕ್ಷ್ಮಿ ಅವರಿಗೆ ಸೇರಿದ KA-05, NB-6633 ನಂಬರಿನ ಕಾರು ಆಗಮಿಸಿತ್ತು. ಪೊಲೀಸರ ಬ್ಯಾರಿಕೇಡ್ ಬಳಿ ಬರುತ್ತಿದ್ದಂತೆ ಮಾಧ್ಯಮದವರನ್ನು ನೋಡಿ ವಿಜಯಲಕ್ಷ್ಮಿ ಅವರ ಕಾರು ವಾಪಸ್ ಹೋಗಿತ್ತು. ಕಾರು ಬದಲಿಸಿಕೊಂಡು ದರ್ಶನ್ ಅವರ ಪತ್ನಿಯನ್ನು ಪೊಲೀಸರು ಜೈಲಿನ ಒಳಗೆ ಕರೆದುಕೊಂಡು ಹೋಗಿದ್ದಾರೆ. ಕಿಯಾ ಕಾರನ್ನು ಬದಲಿಸಿಕೊಂಡು ಬೊಲೆನೋ ಕಾರಿನಲ್ಲಿ ಮಾಧ್ಯಮಗಳ ಕಣ್ತಪ್ಪಿಸಿ ಪೊಲೀಸರು ಜೈಲಿನ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಈ ಹಿಂದೆ ಈಗಿನ ಡಿ.ಸಿ.ಎಂ ಡಿ.ಕೆ ಶಿವಕುಮಾರ್, ಬಿ.ಎಸ್ ಯಡಿಯೂರಪ್ಪ ಮತ್ತು ಹಲವು ವಿ.ಐ.ಪಿ ಗಳು, ಅಗರ್ಭ ಶ್ರೀಮಂತರು, ದರ್ಶನ್ ನಂತಹ ಸೆಲೆಬ್ರೆಟಿಗಳು ಇದೇ ಜೈಲಿನಲ್ಲಿ ತಮ್ಮ ತಪ್ಪಿನ ಕಾರಣಕ್ಕೆ ಕೋರ್ಟ್ ಆದೇಶದಂತೆ ಜೈಲುವಾಸ ಅನುಭವಿಸಿದ್ದಾರೆ. ಈಗಲೂ ಅನುಭವಿಸುತ್ತಿದ್ದಾರೆ.

Click 👇

https://newsnotout.com/2024/06/darshan-thoogudeepa-d-boss-met-by-vinod-prabhakar-kannada-news-sandalwood
https://newsnotout.com/2024/06/kodagu-theft-issue-from-putture-travellers-kannada-news
https://newsnotout.com/2024/06/darshan-thugudeepa-kannada-news-director-om-prakash-news
https://newsnotout.com/2024/06/swaccha-bharat-kannada-news-social-media-viral-video-case
See also  ಮಾಜಿ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್​ ಕುಟುಂಬಕ್ಕೆ ಯುವಕನಿಂದ ಬೆದರಿಕೆ..! ದೂರು ನೀಡಿದ ನಟಿಯ ತಾಯಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget