ಕೊಡಗು

ನಿಯಂತ್ರಣ ತಪ್ಪಿ ಪ್ಯಾರಾಗ್ಲೈಡರ್ ಅಪಘಾತ, ಇಬ್ಬರಿಗೆ ಗಾಯ

456

ನ್ಯೂಸ್ ನಾಟೌಟ್ : ತನ್ನ ನಿಯಂತ್ರಣ ತಪ್ಪಿ ಪ್ಯಾರಾಗ್ಲೈಡರ್ ರಸ್ತೆಗೆ ಅಪ್ಪಳಿಸಿದ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಿಟೂರು ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಹೇಗಾಯ್ತು?

ಎಂಜಿನ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಏಕಾಏಕಿ ಪ್ಯಾರಾ ಗೈಡರ್ ಭೂಸ್ಪರ್ಶ ಮಾಡಿದೆ.ತಕ್ಷಣವೇ ಇಬ್ಬರು ಭಾರಿ ಅಪಾಯವಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.ನಿಟ್ಟೂರು ಗ್ರಾಮದ ಲಕ್ಷಣ ತೀರ್ಥ ನದಿ ಸೇತುವೆ ಬಳಿ ಅಪಘಾತ ನಡೆದಿದ್ದು,ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುತ್ತಣ್ಣ ಎಂಬುವವರ 2 ಸೀಟರ್ ಗೈಡರ್ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.

See also  ಮಡಿಕೇರಿ: ನಿತ್ರಾಣಗೊಂಡು ಹೆಣ್ಣಾನೆ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget