ಮಂಗಳೂರು: ಕರಾವಳಿಯ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ದೈವಸ್ಥಾನದ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಜೀನ್ಸ್ ಪ್ಯಾಂಟ್ ಹಾಕಿದವರಿಗೆ ಮತ್ತು ಸ್ಲಿವ್ ಲೆಸ್ ಟಾಪ್, ಅಸಹ್ಯಕರವಾದ ಬಿಗಿ ಉಡುಪುಗಳನ್ನು ಹಾಕಿದವರಿಗೆ ಕ್ಷೇತ್ರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ವಸ್ತ್ರ ಸಂಹಿತೆ ಕೇವಲ ಹೆಣ್ಣು ಮಕ್ಕಳಿಗೆ ಸೀಮಿತವಲ್ಲ, ಎಲ್ಲಾ ಭಕ್ತರಿಗೂ ಅನ್ವಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.