ನ್ಯೂಸ್ ನಾಟೌಟ್: ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಸೈಲೆಂಟಾಗಿದ್ದಾರೆಂದು ಅನಿಸಿದರೂ ಅವರ ಬಹುನಿರೀಕ್ಷಿತ ಚಿತ್ರ ರಿಚರ್ಡ್ ಆಂಟೋನಿ, ಮಿಥ್ಯ ಚಿತ್ರದ ಶೂಟಿಂಗ್ ಭರದಿಂದ ನಡಿತಿದೆ.ಸದ್ಯ ಈ ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ನಡುವೆಯೂ ತನ್ನ ಕುಟುಂಬದ ಹರಕೆಯ ನೇಮೋತ್ಸವದಲ್ಲಿಯೂ ಅವರು ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಿದ್ದಾರೆ.
ರಕ್ಷಿತ್ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು, ಅಲೆಯೂರು ದೊಡ್ಡ ಮನೆ ಕುಟುಂಬಕ್ಕೆ ಸೇರಿದವರು. ಇಲ್ಲಿ ಹರಕೆಯ ನೇಮೋತ್ಸವ ನಡೆಯುತ್ತಿದ್ದು, ಮೂಲ ಮೈಸಂದಾಯ, ಸಾವಿರಾಳು ಜುಮಾದಿ, ಜೋಡು ಪಂಜುರ್ಲಿ ದೈವಗಳ ನೇಮೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ನಡೆದಿದೆ.ದೈವದ ಕಾರ್ಯಕ್ರಮ ಎಂದಾಗ ತಪ್ಪದೇ ಹಾಜರಾಗುವ ರಕ್ಷಿತ್ ಶೆಟ್ಟಿ ಅವರು ಈ ಬಾರಿಯೂ ಕುಟುಂಬ ಸಮೇತರಾಗಿ ಭಾಗಿಯಾಗಿ ಆಶೀರ್ವಾದ ಪಡೆದಿದ್ದಾರೆ. ರಾತ್ರಿ ಹೊತ್ತಿನಲ್ಲಿ ನೇಮೋತ್ಸವ ಕಾರ್ಯಕ್ರಮವಿದ್ದಿರೋದ್ರಿಂದ ನಡುರಾತ್ರಿ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ. ದೈವದ ಭಂಡಾರ ಹೊರಡುವಾಗಲೂ ರಕ್ಷಿತ್ ಶೆಟ್ಟಿ, ತಂದೆ ತಾಯಿಯ ಜೊತೆ ಭಾಗವಹಿಸಿದ್ದರು. ಕುಟುಂಬದ ದೈವದ ಕಾರ್ಯಕ್ರಮಗಳಿಗೆ ಎಲ್ಲಿದ್ದರೂ ಓಡೋಡಿ ಬರುವ ನಟ ಸಿಂಪಲ್ ಸ್ಟಾರ್ ಹೆಸರಿಗೆ ತಕ್ಕಂತೆ ಸಿಂಪಲ್ಲಾಗಿದ್ದಾರೆ.