ಕರಾವಳಿಸುಳ್ಯ

ಪಂಜ: ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ, ಕೊನೆಗೂ ಮಹಿಳೆಯ ಗುರುತು ಪತ್ತೆ,ಆತ್ಮಹತ್ಯೆ ಶಂಕೆ

217

ನ್ಯೂಸ್ ನಾಟೌಟ್: ಪಂಜ ಸಮೀಪ ಎಡಮಂಗಲದ ಕೇರ್ಪಡ ಎಂಬಲ್ಲಿನ ಕೆರೆಯಲ್ಲಿ ಪತ್ತೆಯಾಗಿರುವ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಶವ ಗಿರಿಜಾ ಅನ್ನುವ ಮಧ್ಯ ವಯಸ್ಕ ಮಹಿಳೆಯದ್ದು ಎಂದು ತಿಳಿದು ಬಂದಿದೆ.

ಈಕೆಯ ಪತಿಯ ಈ ಹಿಂದೆಯೇ ತೀರಿ ಹೋಗಿದ್ದರು. ಆ ಬಳಿಕ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ. ಕಳೆದ ಕೆಲವು ಸಮಯಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊರಿನವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿಯನ್ನು ಇನ್ನಷ್ಟೇ ನೀಡಬೇಕಿದ್ದು ಸಾವಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ.

See also  ವಿರಾಜಪೇಟೆ: ವಾಯುವಿಹಾರಕ್ಕೆಂದು ತೆರಳಿದ ವ್ಯಕ್ತಿಯನ್ನು ತುಳಿದು ಕೊಂದ ಕಾಡಾನೆ, ಕೊಡಗಿನಲ್ಲಿ ಮತ್ತೆ ಅಟ್ಟಹಾಸ ಮೆರೆದ ಪುಂಡ ಕಾಡಾನೆಗಳು
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget