ಕ್ರೈಂ

ಪಂಜದಲ್ಲಿ ಮನೆಯೊಳೆಗೆ ಪತ್ತೆಯಾದ ಯುವಕನ ಶವ

746

ಕೂತ್ಕುಂಜ: ಯುವಕನೊಬ್ಬನ ಶವ ಮನೆಯೊಳಗೆ ನಿಗೂಢವಾಗಿ ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೂತ್ಕುಂಜ ಗ್ರಾಮದ ಪುತ್ಯ ದಿ.ಶಿವಪ್ಪ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರ ರಮೇಶ್ ( 39ವ) ಎಂಬುವವರು ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೊರಗಡೆ ಹೋಗಿದ್ದ ರಮೇಶ್ ಅವರ ತಾಯಿ ಮನೆಗೆ ಬಂದು ನೋಡಿದಾಗ ಮಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ರಮೇಶರು ಹಿಂದೆ ಪಂಜದಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದರು.ಬಳಿಕ ಅಡಿಕೆ ಸುಲಿಯುವುದು ಹಾಗೂ ಕೂಲಿ ಕೆಲಸ ಮಾಡಿ ಮನೆಯಲ್ಲಿ ಒಬ್ಬನೇ ವಾಸವಾಗಿದ್ದರು. ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ರಮೇಶರು ಮದ್ಯ ವ್ಯಸನಿಯಾಗಿದ್ದು ಅವರಿಗೆ ಅನಾರೋಗ್ಯ ಸಮಸ್ಯೆಯೂ ಕಾಡುತ್ತಿತ್ತು ಎನ್ನಲಾಗಿದೆ. ಅವರು ಎರಡು ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮೃತರು ತಾಯಿ ಶ್ರೀಮತಿ ಸೀತಮ್ಮ, ಪತ್ನಿ ಕವಿತಾ, ಪುತ್ರ ನಿಕ್ಷಿತ್, ಪುತ್ರಿ ವೀಕ್ಷಾ, ಸಹೋದರಾದ ತಿರುಮಲೇಶ್ವರ, ಶಿವರಾಮ ಹಾಗೂ ಕುಟುಂಬಸ್ಥನ್ನು ಅಗಲಿದ್ದಾರೆ.

See also  ಸೋನು ಗೌಡ 4 ದಿನ ಪೊಲೀಸ್ ಕಸ್ಟಡಿಗೆ, ಕೋರ್ಟ್ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget