Latestಕ್ರೀಡೆಸುಳ್ಯ

ಪಂಜ: ಕಬಡ್ಡಿ ತರಬೇತಿ ಶಿಬಿರ ಸಮಾರೋಪ ಸಮಾರಂಭ, ಶಿಬಿರಾರ್ಥಿಗಳಿಗೆ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜನೆ

513

ನ್ಯೂಸ್‌ ನಾಟೌಟ್‌: ಪಂಜ ಸರಕಾರಿ ಪದವಿ ಪೂರ್ವ ಕಾಲೇಜು, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸುಳ್ಯ ದ.ಕ, ಲಯನ್ಸ್ ಕ್ಲಬ್ ಪಂಜ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಸಂಯಕ್ತ ಆಶ್ರಯದಲ್ಲಿ ಸ.ಪ.ಪೂ.ಕಾಲೇಜು ಪಂಜದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಏ.10ರಂದು ಆರಂಭಗೊಂಡ ಕಬಡ್ಡಿ ತರಬೇತಿ ಶಿಬಿರ ಎ.19ರಂದು ಸಮಾಪನಗೊಂಡಿತು.

ಈ ಪ್ರಯುಕ್ತ ಕಬಡ್ಡಿ ಶಿಬಿರಾರ್ಥಿಗಳಿಗೆ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಲಾಯಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್‌ ಕುಮಾರ್ ಕರಿಕ್ಕಳ ಉದ್ಘಾಟಿಸಿದರು. ಲ| ತುಕರಾಮ ಏನೆಕಲ್ಲು , ಶ್ರೇಯಂಸ್ ಕುಮಾರ್ ಶೆಟ್ಟಿಮೊಲೆ, ನೇಮಿರಾಜ್ ಪಲ್ಲೋಡಿ ಹಾಗೂ ಸುರೇಶ ನಡ್ಕ ಇವರು ಶುಭಹಾರೈಸಿದರು. 7 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ನಡೆಯಿತು ಶಿಬಿರಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಮಧ್ಯಾಹ್ನ ಕಬಡ್ಡಿ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಪ.ಪೂ.ಕಾ ಪಂಜ (ಪ್ರೌ.ವಿ) ಇದರ ಮುಖ್ಯ ಶಿಕ್ಷಕ ದೇವಿಪ್ರಸಾದ್ ಎ. ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಅಧ್ಯಕ್ಷ ಹಿತೇಶ್ ಪಂಜದಬೈಲು, ಪಂಜ ಸ.ಪ.ಪೂ.ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿನ್ನಪ್ಪ ಕಾಣಿಕೆ, ಎಸ್.ಡಿ.ಎಂ.ಸಿ ಸ.ಪ.ಪೂ.ಕಾ ಪಂಜ(ಪ್ರೌ.ವಿ) ಅಧ್ಯಕ್ಷ ಸೋಮಶೇಖರ ಬಿ., ಪಂಜ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ವೆಂಕಪ್ಪ ಗೌಡ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸುಳ್ಯ ಇದರ ಅಧ್ಯಕ್ಷ ಮಾಧವ ಬಿ.ಕೆ, ದೊಡ್ಡಣ್ಣ ಬರಮೇಲು, ಕಬಡ್ಡಿ ತರಬೇತುದಾರರಾದ ಜಸ್ವಂತ್ ಎಸ್, ಮೂರ್ತಿ ಜಿ, ಸಹ ತರಬೇತುದಾರರಾದ ಸಂದೀಪ್ ರೈ ಪಲ್ಲೋಡಿ, ಉಮೇಶ್ ಪಂಜದಬೈಲು, ಶಿಬಿರದ ಸಂಯೋಕರಾದ, ರಾಮಚಂದ್ರ ಪಿ.ಎನ್, ಶಿಬಿರದ ಸಂಚಾಲಕರಾದ ಯೋಗೀಶ್ ಸಿ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಪವನ್ ಪಲ್ಲತ್ತಡ್ಕ, ಕ್ಲಬ್ ನ ಕಾರ್ಯದರ್ಶಿ ಶಶಿ ದಾಸ್ ನಾಗತೀರ್ಥ‌ ಹಾಗೂ ಸದಸ್ಯರು, ಶಿಬಿರಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. 2025ರಲ್ಲಿ ಬಹರೆನ್ ನಲ್ಲಿ ನಡೆಯಲಿರುವ ಏಷ್ಯಾನ್ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಜೂನಿಯರ್ ಮಹಿಳಾ ಕಬಡ್ಡಿ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುವ ರಾಮಕುಂಜ ಶಾಲೆ ವಿದ್ಯಾರ್ಥಿನಿ ಧನ್ವಿ ಎಂ. ಅವರನ್ನು ಗೌರವಿಸಲಾಯಿತು. ವೆಂಕಪ್ಪ ಗೌಡ ಸ್ವಾಗತಿಸಿದರು. ಸಂದೀಪ್ ರೈ ಪಲ್ಲೋಡಿ ನಿರೂಪಿಸಿದರು. ಉಮೇಶ್ ಪಂಜದಬೈಲು ವಂದಿಸಿದರು.

See also  ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮಿಂಚಿದ ಕ್ಷಮಾ, ಸುಳ್ಯ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಏಷ್ಯನ್ ಗೇಮ್ಸ್ ಗೆ ಆಯ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget