ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಪಾನಿಪುರಿ ತಿನ್ನಲು ಬಸ್ಸ್ ನಿಲ್ಲಿಸಿದ ಚಾಲಕ! ದಂಡ ವಿಧಿಸಿ ಅಮಾನತುಗೊಳಿಸಿದ ಮುನ್ಸಿಪಲ್ ಕಾರ್ಪೊರೇಶನ್‌!

ನ್ಯೂಸ್ ನಾಟೌಟ್: ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಾರಿಗೆಗಾಗಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಎಎಮ್‌ಟಿಎಸ್ ಮತ್ತು ಬಿಆರ್‌ಟಿಎಸ್ ಸೇವೆಯನ್ನು ನೀಡಲಾಗುತ್ತದೆ. ಗುಜರಾತ್‌ನ ಅದಾಲಜ್‌ನಲ್ಲಿ ರಸ್ತೆ ಬದಿಯ ಪಾನಿಪುರಿ ಅಂಗಡಿಯಲ್ಲಿ ಹತ್ತು ನಿಮಿಷ ಪ್ರಯಾಣಿಕರಿದ್ದ ಬಸ್ ನಿಲ್ಲಿಸಿ, ಪಾನಿಪುರಿ ಸೇವಿಸಿದ ಬಿಆರ್‌ಟಿಎಸ್ ಸರಕಾರಿ ಬಸ್ಸ್ ಚಾಲಕನೊಬ್ಬ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಶನಿವಾರ ಎಪ್ರಿಲ್ ೮ ರಂದು ಕ್ರಮ ಕೈಗೊಳ್ಳಗಾಗಿದ್ದು, ಎಪ್ರಿಲ್ ೧ಕ್ಕೆ ಘಟನೆ ನಡೆದಿತ್ತು ಎನ್ನಲಾಗಿದೆ. ಈ ಘಟನೆ ನಡೆದಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರಿಂದಾಗಿ ಚಾಲಕನ ವಿರುದ್ಧ ಕ್ರಮ ಕೈಗೊಂಡಿದೆ.

ಝುಂದಲ್-ತ್ರಿಮಂದಿರ್ ಮಾರ್ಗವಾಗಿ ಸಂಚರಿಸುವ ಬಿಆರ್‌ಟಿಎಸ್ ಬಸ್‌ನ ಚಾಲಕ ನೀಲೇಶ್ ಪಾರ್ಮರ್, ಸ್ವಾಗತ್ ಸಿಟಿ ಸೊಸೈಟಿ ಬಳಿ ರಸ್ತೆ ಬದಿಯಲ್ಲಿನ ಪಾನಿಪೂರಿ ಅಂಗಡಿಯಲ್ಲಿ ಪಾನಿಪೂರಿ ಸೇವಿಸಲು ಬಸ್ ನಿಲುಗಡೆ ಮಾಡಿದ್ದಾರೆ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಸುಮಾರು 10 ನಿಮಿಷ ಕಾಯಬೇಕಾಗಿ ಬಂದಿದೆ. ಈ ಪೈಕಿ ಓರ್ವ ಪ್ರಯಾಣಿಕ ಚಾಲಕ ಪಾನಿಪುರಿ ತಿನ್ನುತ್ತಿರುವ ವಿಡಿಯೊ ಚಿತ್ರೀಕರಣ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಈ ವಿಷಯ ಬಿಆರ್‌ಟಿಎಸ್ ಜನ್‌ಮಾರ್ಗ್ ಲಿ. ಅಧಿಕಾರಿಗಳ ಗಮನಕ್ಕೆ ಬಂದು, ಅವರು ಬಸ್ ನಿರ್ವಹಣಾ ಸಂಸ್ಥೆಗೆ ರೂ. 15,000 ದಂಡ ವಿಧಿಸಿದ್ದು, ಆತನಿಗೆ ಒಂದು ಸಾವಿರ ದಂಡ ವಿಧಿಸಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ವರದಿ ತಿಳಿಸಿವೆ.

Related posts

ಮಾಜಿ ಪೊಲೀಸ್ ಕಮಿಷನರ್ ಕಾರು ಅಪಘಾತ..! ಭಾಸ್ಕರ್ ರಾವ್ ಜೊತೆಗಿದ್ದವರು ಐಸಿಯುಗೆ ದಾಖಲು

ಬರೋಬ್ಬರಿ 3 ಕೆ.ಜಿ. ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿಂದ 70 ವರ್ಷದ ಅಜ್ಜ..! ಭರ್ಜರಿ ಉಂಡ ಅಜ್ಜನಿಗೆ ಮುಂದೇನಾಯ್ತು?

ಗಣೇಶ ವಿಗ್ರಹದೊಂದಿಗೆ 65 ಗ್ರಾಂ ಚಿನ್ನದ ಸರವನ್ನೂ ವಿಸರ್ಜನೆ ಮಾಡಿದ ಯುವಕರು..! ರಾತ್ರಿಪೂರ್ತಿ ಹುಡುಕಾಟ ನಡೆಸಿದವರಿಗೆ ಕೊನೆಗೂ ಕರುಣೆ ತೋರಿದ ಗಣಪ