ಸುಳ್ಯ

ಸುಳ್ಯ : ಕಲ್ಲಪಳ್ಳಿ ಪಾಣತ್ತೂರು ರಸ್ತೆಯಲ್ಲಿ ಕುಸಿದ ಮಣ್ಣು ತೆರವು, ವಾಹನ ಸಂಚಾರಕ್ಕೆ ಮುಕ್ತ , ರಾತ್ರಿ ಸಂಚಾರ ನಿಷೇಧ

ನ್ಯೂಸ್ ನಾಟೌಟ್ : ಸುಳ್ಯ ಕಲ್ಲಪಳ್ಳಿ – ಪಾಣತ್ತೂರು ಅಂತಾರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ರಸ್ತೆಗೆ ಗುಡ್ಡಕುಸಿದು ಅಂತಾರಾಜ್ಯ ಸಂಪರ್ಕ ಸ್ಥಗಿತಗೊಂಡಿದ್ದು, ಭಾನುವಾರ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತ ನೀಡಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ ತಿಳಿಸಿದ್ದಾರೆ.

ಬಾಟೋಳಿಯಲ್ಲಿ ನಿರಂತರ ಮಣ್ಣು ಕುಸಿತ ಉಂಟಾದ ಪರಿಣಾಮ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಈ ವೇಳೆ ಕಲ್ಲಪಳ್ಳಿ – ಪಾಣತ್ತೂರು – ಕರಿಕೆ ವ್ಯಾಪ್ತಿಯಿಂದ ಬರುವ ಸಾರ್ವಜನಿಕ , ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಗಿದ್ದು, ರಸ್ತೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಪಾದಚಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಿನ್ನೆ ಕಾಸರಗೋಡು ಉಪ ಜಿಲ್ಲಾಧಿಕಾರಿ ದಿಲೀಪ್ , ಭೂ ತಜ್ಞ ಅಮೃತ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದರು.

Related posts

ಶ್ರೀ ಭಗವಾನ್ ಸಂಘ ಊರುಬೈಲು ಇವರಿಂದ ಚೆಂಬು ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ

ಉಬರಡ್ಕ: ಚಲಿಸುತ್ತಿದ್ದ ಆಟೋ ರಿಕ್ಷಾಕ್ಕೆ ಹಠಾತ್ ಅಡ್ಡ ಬಂದ ಕಾಡು ಹಂದಿ, ರಿಕ್ಷಾ ಪಲ್ಟಿ, ದಂಪತಿಗೆ ಗಾಯ

ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳಿದ ಸುಳ್ಯದ ವಕೀಲರ ತಂಡದಿಂದ ಪಂಪಾ ನದಿಯ ಸ್ವಚ್ಛತೆ..! ನ್ಯಾಯವಾದಿಗಳ ಮಾದರಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ