ಕ್ರೈಂಚಿಕ್ಕಮಗಳೂರುರಾಜ್ಯವಿಡಿಯೋವೈರಲ್ ನ್ಯೂಸ್

ಪ್ಯಾಲೆಸ್ಟೈನ್ ದೇಶದ ಧ್ವಜ ಹಿಡಿದು ಬೈಕ್ ​ನಲ್ಲಿ ಓಡಾಟ..! ನಾಲ್ವರು ಅಪ್ರಾಪ್ತರು ಪೊಲೀಸ್ ವಶಕ್ಕೆ..! ಇಲ್ಲಿದೆ ವಿಡಿಯೋ

165

ನ್ಯೂಸ್ ನಾಟೌಟ್: ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರ ತಂಡವೊಂದು ಪ್ಯಾಲೆಸ್ಟೈನ್ ಧ್ವಜವನ್ನು (Palestine) ಹಿಡಿದು ಬೈಕ್​ನಲ್ಲಿ ಹಲವು ಬಾರಿ ಓಡಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ರೌಂಡ್ಸ್​ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಈ ಘಟನೆ ಸಂಬಂಧ ಇದೀಗ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ನಾಲ್ವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತ ಬಾಲಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕರಿಗೆ ಪ್ಯಾಲೆಸ್ಟೈನ್ ಧ್ವಜ ಸಿಕ್ಕಿದ್ದು ಹೇಗೆ? ಧ್ವಜ‌ ನೀಡಿ ನಗರದಾದ್ಯಂತ ಓಡಾಟ ನಡೆಸಲು ಸೂಚನೆ ನೀಡಲಾಗಿತ್ತಾ? ಇಂದು ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನಕ್ಕೆ ಪ್ಲಾನ್ ಮಾಡಲಾಗಿತ್ತಾ? ಎಂಬ ಅಂಶಗಳ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ಯಾಲೆಸ್ಟೈನ್ ಧ್ವಜ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 198ಅಡಿ ಪ್ರಕರಣ ದಾಖಲಾಗಿದೆ. ಕೋಮು ಸೂಕ್ಷ್ಮ ಚಿಕ್ಕಮಗಳೂರು ನಗರದಲ್ಲಿ ಗಲಭೆಗೆ ಸಂಚು ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

Click

https://newsnotout.com/2024/09/mangaluru-masjid-issue-vhp-protest-in-bc-road-kannada-news/
https://newsnotout.com/2024/09/darshan-thugudeepa-in-ballary-and-secrete-latter-to-him-from-lawyer/
See also  ಇಸ್ರೇಲ್ ಗೆ 3 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಒಪ್ಪಿಗೆ..! ಯುದ್ಧಕ್ಕೆ ಮತ್ತಷ್ಟು ಪ್ರಚೋದನೆ ನೀಡುತ್ತಿದೆಯಾ ಅಮೆರಿಕ..?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget